Webdunia - Bharat's app for daily news and videos

Install App

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಆಟಗಾರರ ಗುಣಮಟ್ಟ ಕಳಪೆ: ಬಾಯಿಬಿಟ್ಟ ಅಫ್ರಿದಿ

Webdunia
ಗುರುವಾರ, 14 ಜುಲೈ 2016 (12:26 IST)
ಪಾಕಿಸ್ತಾನದ ಕ್ರಿಕೆಟ್ ಆಡಳಿತ ಮಂಡಳಿ ಸದಸ್ಯರಿಗೆ ಮಾತ್ರವಲ್ಲದೇ ತಂಡದ ಆಟಗಾರರನ್ನು ಕುರಿತು ಕೆಲವು ಕಠಿಣ ಪದಗಳನ್ನು ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಯೋಗಿಸಿದ್ದಾರೆ. ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ ಮಾಜಿ ನಾಯಕ ದೇಶದಲ್ಲಿ ಕ್ರಿಕೆಟ್ ಸ್ಥಿತಿಗತಿಯನ್ನು ಪ್ರಾಮಾಣಿಕ ರೀತಿಯಲ್ಲಿ ವರ್ಣಿಸಿದರು. ತಾವು ತಂಡದಲ್ಲಿರುವ ಆಟಗಾರರಿಗಿಂತ ಉತ್ತಮ ಎಂದು ಭಾವಿಸಿದ್ದರಿಂದ ಐಸಿಸಿ ವಿಶ್ವ ಟಿ 20 ಬಳಿಕ ತಾವು ನಿವೃತ್ತರಾಗಲಿಲ್ಲ ಎಂದು ಅಫ್ರಿದಿ ಹೇಳಿದರು.
 
 ತಾವು ಸಮರ್ಥ ತಂಡವನ್ನು ಹಿಂದೆ ಬಿಟ್ಟು ಹೋಗಬೇಕೆಂದು ಬಯಸಿದ್ದೆ. ಆದರೆ ಈಗ ಬರುತ್ತಿರುವ ಆಟಗಾರರನ್ನು ಗಮನಿಸಿದರೆ, ತಂಡದಲ್ಲಿ ತಾವು ಖಂಡಿತವಾಗಿ ಸ್ಥಾನ ಪಡೆಯಲು ಸಮರ್ಥನೆಂದು ಭಾವಿಸಿದ್ದಾಗಿ ಅಫ್ರಿದಿ ಹೇಳಿದರು. ಪಾಕಿಸ್ತಾನದ ತಂಡ ವಿಪುಲ ಪ್ರತಿಭಾಶಾಲಿಗಳಿಂದ ಕೂಡಿದೆ ಎಂಬ ಮಾತು ನಿಜವಲ್ಲ ಎಂದು ಆಲ್‌ರೌಂಡರ್ ಬಾಯಿಬಿಟ್ಟರು.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಆಟಗಾರರ ಗುಣಮಟ್ಟ ಅಂತಾರಾಷ್ಟ್ರೀಯ ಮಾನದಂಡಕ್ಕೆ ಹೋಲಿಕೆಯಾಗುವುದಿಲ್ಲ ಎಂದೂ ಅಫ್ರಿದಿ ಹೇಳಿದರು. ನಾನು ಇನ್ನಷ್ಟು ಹೇಳಬೇಕೆಂದು ಬಯಸಿದ್ದೆ. ಆದರೆ ಪಾಕ್ ಮಂಡಳಿ ಜತೆ ಗುತ್ತಿಗೆ ಹಿನ್ನೆಲೆಯಲ್ಲಿ ಸಂಯಮ ಕಾಯ್ದುಕೊಂಡಿದ್ದೇನೆ ಎಂದು ಎಂದು ಅಫ್ರಿದಿ ಹೇಳಿದರು. ಆದರೆ ನಿವೃತ್ತಿಯಾದ ಬಳಿಕ ದೇಶದಲ್ಲಿ ಎಷ್ಟು ಕೆಟ್ಟದಾಗಿ ಕ್ರೀಡೆಯನ್ನು ನಿರ್ವಹಿಸಲಾಗುತ್ತಿದೆಯೆಂಬ ಕುರಿತು ಎಲ್ಲವನ್ನೂ ಬಿಚ್ಚಿಡುವುದಾಗಿ ಅಫ್ರಿದಿ ಭರವಸೆ ನೀಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Test Crickte: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮತ್ತೊಂದು ಬದಲಾವಣೆ ಸುದ್ದಿ

TATA IPL 2025: ಕ್ರಿಕೆಟ್ ಪ್ರಿಯರಿಗೆ ಗುಡ್‌ನ್ಯೂಸ್‌

Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

ಮುಂದಿನ ಸುದ್ದಿ
Show comments