Webdunia - Bharat's app for daily news and videos

Install App

ಬಿಸಿಸಿಐ ತಮಗೆ 400,000 ಡಾಲರ್ ನೀಡಬೇಕಿದೆ: ಮುತ್ತಯ್ಯ ಮುರಳೀಧರನ್

Webdunia
ಗುರುವಾರ, 14 ಜುಲೈ 2016 (11:44 IST)
ಬಿಸಿಸಿಐ ಮತ್ತು ಐಪಿಎಲ್ ಸದಾ ವಿವಾದದ ಸುಳಿಯಲ್ಲಿ ಸುತ್ತುತ್ತಲೇ ಇದೆ. ಇತ್ತೀಚಿನ ವಿವಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್,  ಬಿಸಿಸಿಐ ಜಯವರ್ದನೆ ಮತ್ತು ತಮಗೆ ಇನ್ನೂ ತಲಾ 500,000 ಡಾಲರ್ ಮತ್ತು 400,000 ಡಾಲರ್ ನೀಡಬೇಕೆಂದು ಒತ್ತಾಯಿಸಿರುವುದು.
 
 ಮೊಹಮ್ಮದ್ ಶಮಿ ಅವರಿಗೆ ಗಾಯಗಳಿಂದ ಐಪಿಎಲ್ 2016 ಮಿಸ್ ಆಗಿದ್ದರಿಂದ 2.2 ಕೋಟಿ ರೂ.ಗಳನ್ನು ನೀಡಿದ ಬಳಿಕ ಪೇಮೆಂಟ್ ಬಾಕಿವುಳಿದಿರುವ ಕುರಿತು ಬ್ರಾಡ್ ಹಾಗ್ ಕಿಡಿ ಹೊತ್ತಿಸಿದ್ದಾರೆ.
 
 ಕೊಚ್ಚಿ ಟಸ್ಕರ್ಸ್ 2011ರ ಬಿಸಿಸಿಐ ಲೀಗ್ ಭಾಗವಾಗಿತ್ತು. ಆದರೆ ಬ್ಯಾಂಕ್ ಖಾತರಿ ನೀಡಲು ವಿಫಲವಾದ್ದರಿಂದ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಯನ್ನು ಬಿಸಿಸಿಐ ರದ್ದು ಮಾಡಿತ್ತು.
 
ಮುರಳಿ, ಮಹೇಲಾ, ಲಕ್ಷ್ಮಣ್ ಮತ್ತು ರವೀಂದ್ರ ಜಡೇಜಾ ಆ ತಂಡದ ಅತೀ ಪ್ರಮುಖ ಆಟಗಾರರು. ಬಿಸಿಸಿಐ ನನಗೆ 400,000 ಡಾಲರ್ ಮತ್ತು ತಂಡದ ನಾಯಕರಾಗಿದ್ದ ಮಹೇಲಾಗೆ 500,000 ಡಾಲರ್ ನೀಡಬೇಕಿದೆ. ನಾನು ಬಿಸಿಸಿಐ ಅಧಿಕಾರಿಗಳ ಜತೆ ಅನೇಕ ಬಾರಿ ಮಾತನಾಡಿದ್ದೇನೆ. ಆದರೆ ಅವರು ಅನೇಕ ಬಾರಿ ಭರವಸೆ ನೀಡಿದ್ದರೂ, ಏನೂ ಸಂಭವಿಸಿಲ್ಲ. ಒಟ್ಟಾರೆ ಬಿಸಿಸಿಐ ಕೊಚ್ಚಿ ಆಟಗಾರರಿಗೆ 2 ದಶಲಕ್ಷ ಡಾಲರ್ ನೀಡಬೇಕಿದ್ದು, ನಾವು ಶೇ. 40ರಷ್ಟು ಹಣ ಪಡೆಯಲು ಇನ್ನೂ ಕಾಯುತ್ತಿದ್ದೇವೆ ಎಂದು ಮುರಳೀಧರನ್ ಹೇಳಿದ್ದಾರೆ.
 
 ಬಿಸಿಸಿಐ ಮುರಳಿ ಆರೋಪಗಳನ್ನು ಅಲ್ಲಗಳೆದು ಈ ಆಟಗಾರರಿಗೆ ಫ್ರಾಂಚೈಸಿ ನೀಡಬೇಕೇ ಹೊರತು ಮಂಡಳಿ ನೀಡುವಂತಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿದ್ದು ಅಲ್ಲಿ ಇತ್ಯರ್ಥವಾದ ಬಳಿಕ ಆಟಗಾರರಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Test Crickte: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮತ್ತೊಂದು ಬದಲಾವಣೆ ಸುದ್ದಿ

TATA IPL 2025: ಕ್ರಿಕೆಟ್ ಪ್ರಿಯರಿಗೆ ಗುಡ್‌ನ್ಯೂಸ್‌

Virat Kohli: ಮಾರ್ಚ್ 17 ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಂದ ಕೊಹ್ಲಿಗೆ ಸರ್ಪ್ರೈಸ್

IPL 2025: ಐಪಿಎಲ್ 2025 ರ ಹೊಸ ವೇಳಾಪಟ್ಟಿ ವಿವರ

Virat Kohli retirement: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿದಾಯ ಪಂದ್ಯವನ್ನೂ ನೀಡದೇ ಗೇಟ್ ಪಾಸ್

ಮುಂದಿನ ಸುದ್ದಿ
Show comments