Select Your Language

Notifications

webdunia
webdunia
webdunia
webdunia

ದ್ವಿತೀಯ ಏಕದಿನ: ಭಾರತ ಇಂದು ಮಾಡಲಿರುವ ದಾಖಲೆಗಳಿವು

ದ್ವಿತೀಯ ಏಕದಿನ: ಭಾರತ ಇಂದು ಮಾಡಲಿರುವ ದಾಖಲೆಗಳಿವು
Cuttack , ಗುರುವಾರ, 19 ಜನವರಿ 2017 (12:00 IST)
ಕಟಕ್: ಇಂಗ್ಲೆಂಡ್ ವಿರುದ್ದ ಇಂದು ಎರಡನೇ ಏಕದಿನ ಪಂದ್ಯವಾಡುತ್ತಿರುವ ಭಾರತಕ್ಕೆ ಹಲವು ದಾಖಲೆ ಮಾಡುವ ಅವಕಾಶಗಳಿವೆ. ಅವು ಯಾವುವು ಯಾವುದೆಲ್ಲಾ ದಾಖಲೆಗಳೆಲ್ಲಾ ಮುರಿಯುವ ಅವಕಾಶಗಳಿವೆ ಎಂದು ನೋಡೋಣ.
 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನು 28 ರನ್ ಗಳಿಸಿದರೆ, ಭಾರತ ತಂಡದ ನಾಯಕನಾಗಿ 1000 ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ. ಈ ದಾಖಲೆ ಮಾಡಿದ ಏಳನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆ ಅವರು ಪಾತ್ರರಾಗಲಿದ್ದಾರೆ.

ಇನ್ನೂ ಎರಡು ವಿಕೆಟ್ ಪಡೆದರೆ ರವೀಂದ್ರ ಜಡೇಜಾ ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.  ಒಂದು ವೇಳೆ ಇಂದು ಭಾರತ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡರೆ, ಸತತ ಐದನೇ ಬಾರಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಮಾಡಲಿದೆ.  ಸರಣಿ ಕೈವಶ ಇಂದೇ ಆಗುತ್ತಾ? ನೋಡಬೇಕಾದರೆ ಪಂದ್ಯ ಮುಗಿಯುವವರೆಗೂ ಕಾಯಲೇ ಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯನ್ನು ಕಾಡುಪ್ರಾಣಿಗಳಿಗೆ ಹೋಲಿಸಿದ ವೀರೇಂದ್ರ ಸೆಹ್ವಾಗ್!