Select Your Language

Notifications

webdunia
webdunia
webdunia
webdunia

ಸರ್ಫ್ರಾಜ್ ಅಹ್ಮದ್ ಮನೋಜ್ಞ ಶತಕ : ಪಾಕ್ 2ನೇ ಏಕದಿನದಲ್ಲಿ 251ಕ್ಕೆ ಆಲೌಟ್

ಸರ್ಫ್ರಾಜ್ ಅಹ್ಮದ್ ಮನೋಜ್ಞ ಶತಕ : ಪಾಕ್ 2ನೇ ಏಕದಿನದಲ್ಲಿ 251ಕ್ಕೆ ಆಲೌಟ್
ಲಂಡನ್: , ಶನಿವಾರ, 27 ಆಗಸ್ಟ್ 2016 (18:55 IST)
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಸರ್ಫ್ರಾಜ್ ಅಹ್ಮದ್ ಅವರ ಮನೋಜ್ಞ ಶತಕದ ನೆರವಿನಿಂದ ಪಾಕಿಸ್ತಾನ 50 ಓವರುಗಳು ಮುಗಿಯಲು ಕೇವಲ ಒಂದು ಎಸೆತ ಬಾಕಿವುಳಿದಿರುವಂತೆ ಎಲ್ಲಾ ವಿಕೆಟ್ ಕಳೆದುಕೊಂಡು 251 ರನ್  ದಾಖಲಿಸಿದೆ.

ಇಮಾದ್ ವಸೀಂ ಕೂಡ ಉತ್ತಮ ಸ್ಕೋರ್ ಮಾಡಿ 63 ರನ್ ದಾಖಲಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಕಬಳಿಸಿದರು ಮತ್ತು ಲಿಯಾಮ್ ಪ್ಲಂಕೆಟ್ 2 ವಿಕೆಟ್ ಗಳಿಸಿದರು. ಪಾಕಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ನಂತರ ಸರ್ಫ್ರಾಜ್ ಅಹ್ಮದ್ ಅವರ ಅದ್ಭುತ ಶತಕ ಪಾಕಿಸ್ತಾನ ಆಸೆಯನ್ನು ಚಿಗುರಿಸಿತು.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಡ್ರಾಮಾಡಿಕೊಂಡು ಒಂದನೇ ನಂಬರ್ ಸ್ಥಾನ ಪಡೆದ ಪಾಕ್ ಏಕ ದಿನ ಸರಣಿಯಲ್ಲಿ ಅದೇ ಗತಿಯನ್ನು ಕಾಯ್ದುಕೊಳ್ಳಲು ವಿಫಲವಾಗಿ ಮೊದಲ ಪಂದ್ಯವನ್ನು 44 ರನ್‌ಗಳಿಂದ ಸೋತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನ್‌ಸ್ಟನ್ ಸಲೇಮ್ ಓಪನ್ ಫೈನಲ್ ಪ್ರವೇಶಿಸಿದ ಪಯಸ್-ಬೆಗೆಮ್ಯಾನ್ ಜೋಡಿ