Select Your Language

Notifications

webdunia
webdunia
webdunia
webdunia

ವಿನ್‌ಸ್ಟನ್ ಸಲೇಮ್ ಓಪನ್ ಫೈನಲ್ ಪ್ರವೇಶಿಸಿದ ಪಯಸ್-ಬೆಗೆಮ್ಯಾನ್ ಜೋಡಿ

ವಿನ್‌ಸ್ಟನ್ ಸಲೇಮ್ ಓಪನ್ ಫೈನಲ್ ಪ್ರವೇಶಿಸಿದ ಪಯಸ್-ಬೆಗೆಮ್ಯಾನ್ ಜೋಡಿ
ವಿನ್‌ಸ್ಟನ್ ಸಲೇಮ್: , ಶನಿವಾರ, 27 ಆಗಸ್ಟ್ 2016 (17:54 IST)
ಹಿರಿಯ ಆಟಗಾರ ಲಿಯಾಂಡರ್ ಪಯಸ್ ರಿಯೊ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ ನಿರಾಶೆಯನ್ನು ಬದಿಗೊತ್ತಿ ಜರ್ಮನಿಯ ಜೋಡಿ ಆಂಡ್ರೆ ಬೆಗೆಮ್ಯಾನ್ ಜತೆಗೆ ಎಟಿಪಿ ವಿನ್‌ಸ್ಟನ್-ಸಲೇಮ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸ್ವೀಡನ್‌ನ ರಾಬರ್ಟ್ ಲೈಂಡ್‌ಸ್ಟೆಡ್ ಮತ್ತು ಪಾಕಿಸ್ತಾನದ ಐಸಮ್ ಉಲ್ ಹಕ್ ಖುರೇಶಿಯನ್ನು ಹಣಾಹಣಿ ಹೋರಾಟದಲ್ಲಿ ಸೋಲಿಸಿದರು. 
 
ಭಾರತ-ಜರ್ಮನಿ ಜೋಡಿ ಸೂಪರ್ ಟೈ ಬ್ರೇಕ್‌ನಲ್ಲಿ 1-6, 7-6, 10-4ರಿಂದ ಗೆಲುವು ಗಳಿಸಿತು. ಫೈನಲ್‌ನಲ್ಲಿ ಇವರಿಬ್ಬರು ಸ್ಪೇನ್‌ನ ಗುಲೇರ್‌ಮೊ ಗಾರ್ಸಿಯಾ-ಲೋಪೆಜ್ ಮತ್ತು ಫಿನ್ಲೆಂಡ್ ಹೆನ್ರಿ ಕಾಂಟಿನೆನ್ ಅವರ ವಿರುದ್ಧ ಸೆಣಸಲಿದ್ದಾರೆ.
 
ಸೆಮಿ ಫೈನಲ್ ಪಂದ್ಯದಲ್ಲಿ ಪಯಸ್ ಬೆಗೆಮಾನ್ ಜೋಡಿ ಎರಡು ಬಾರಿ ಸರ್ವೀಸ್ ಬ್ರೇಕ್ ಆಗಿದ್ದರಿಂದ ಮೊದಲ ಸೆಟ್ಟನ್ನು 1-6ರಿಂದ ಸೋತರು. ಎರಡನೇ ಸೆಟ್‌ನಲ್ಲಿ ಪಯಸ್- ಬೆಗೆಮನ್ ಸರ್ವ್ ಉಳಿಸಿಕೊಂಡು ಟೈ ಬ್ರೇಕರ್‌ನಲ್ಲಿ ಗೆದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೇಟಿಯಾಗಲು ಬಯಸಿದ ಸಾಕ್ಷಿ ಇಚ್ಛೆ ಪೂರೈಸಿದ ಸೆಹ್ವಾಗ್