Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಟೀಕಾಕಾರರ ಬಾಯ್ಮುಚ್ಚಿಸಿದ ಕೊಹ್ಲಿಗೆ ಸಂಜಯ್ ಮಂಜ್ರೇಕರ್ ತರಾಟೆ

ವಿರಾಟ್ ಕೊಹ್ಲಿ
ಪುಣೆ: ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಹೊರಗಿನವರ ಮಾತಿಗೆ ಕಿವಿಗೊಡಲ್ಲ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ತಿರುಗೇಟು ನೀಡಿದ್ದಾರೆ.


ರಾಹುಲ್ ಫಾರ್ಮ್ ಬಗ್ಗೆ ಮಾತನಾಡಿರುವ ಕೊಹ್ಲಿ ‘ಮಾತನಾಡುವುದು ಜನರ ಚಾಳಿ. ಹೊರಗಿನವರ ಮಾತಿಗೆ ಕಿವಿಗೊಡಲ್ಲ. ಫಾರ್ಮ್ ನಲ್ಲಿಲ್ಲದ ಆಟಗಾರರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಜಯ್ ಮಂಜ್ರೇಕರ್ ಕೊಹ್ಲಿ, ಧೋನಿಯಂತೆ ಟೀಕೆಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಬೇಕು ಎಂದಿದ್ದಾರೆ.

‘ಹೊರಗಿನವರ ಮಾತುಗಳನ್ನು ನಾನ್ ಸೆನ್ಸ್ ಎಂದು ಹೇಳುವ ಕೊಹ್ಲಿ ಒಂದನ್ನು ಅರ್ಥಮಾಡಿಕೊಳ್ಳಬೇಕು. ಉತ್ತಮವಾಗಿ ಅಡಿದಾಗ ಹೊಗಳುತ್ತಾರೆ, ಕೆಟ್ಟದಾಗಿ ಆಡಿದಾಗ ವಿಮರ್ಶೆ ಎದುರಿಸಲೂ ಸಿದ್ಧರಾಗಬೇಕಾಗುತ್ತದೆ. ಇದನ್ನು ಸಮನಾಗಿ ಸ್ವೀಕರಿಸುವ ಶಾಂತ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ವಿರಾಟ್, ಧೋನಿಯಿಂದ ಕಲಿಯಬೇಕು’ ಎಂದು ಸಂಜಯ್ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಏಕದಿನದಲ್ಲಿ ಇಬ್ಬರು ಡೆಬ್ಯೂಟ್: ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಒಲಿಯುತ್ತಾ ಅದೃಷ್ಟ?