Webdunia - Bharat's app for daily news and videos

Install App

ಜಸ್ಪ್ರೀತ್ ಬುಮ್ರಾಗೆ ರೆಸ್ಟ್, ಪತ್ನಿ ಸಂಜನಾ ಗಣೇಶನ್ ಮೈದಾನದಲ್ಲಿ ಹಾಜರ್!

Krishnaveni K
ಶನಿವಾರ, 24 ಫೆಬ್ರವರಿ 2024 (10:17 IST)
Photo Courtesy: Twitter
ಮುಂಬೈ: ಒಂದೆಡೆ ಸತತ ಕ್ರಿಕೆಟ್ ನಿಂದ ಬಳಲಿರುವ ಕಾರಣಕ್ಕೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದರೆ ಇತ್ತ ಅವರ ಪತ್ನಿ ಸಂಜನಾ ಗಣೇಶನ್ ಬಹಳ ದಿನಗಳ ನಂತರ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶ್ ಕ್ರೀಡಾ ನಿರೂಪಕಿ. ಮದುವೆಗೆ ಮೊದಲು ಮತ್ತು ನಂತರವೂ ಸಂಜನಾ ಕ್ರಿಕೆಟ್ ಪಂದ್ಯಗಳ ವೇಳೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಪ್ರೆಗ್ನೆನ್ಸಿ ಬಳಿಕ ಸಂಜನಾ ತಮ್ಮ ಕೆಲಸಗಳಿಂದ ದೂರವಿದ್ದು ಮಗುವಿನ ಕಡೆಗೆ ಗಮನ ಕೊಟ್ಟಿದ್ದರು. ಇದೀಗ ಸಂಜನಾ ಮತ್ತೆ ತಮ್ಮ ಎಂದಿನ ಕೆಲಸಕ್ಕೆ ಮರಳಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯುಪಿಎಲ್ ಟೂರ್ನಿ ಮೂಲಕ ಸಂಜನಾ ತಮ್ಮ ವೃತ್ತಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಕ್ರೀಡಾ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಮೈದಾನದಲ್ಲಿರುವ ಕ್ಷಣವನ್ನು ಹಂಚಿಕೊಂಡಿರುವ ಜಸ್ಪ್ರೀತ್ ಬುಮ್ರಾ ನೀನು ಮತ್ತೆ ಕೆಲಸಕ್ಕೆ ಮರಳಿರುವುದು ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಜಸ್ಪ್ರೀತ್ ಬುಮ್ರಾಗೆ ನಾಲ್ಕನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಐದನೇ ಪಂದ್ಯಕ್ಕೂ ಅವರು ಮರಳುವುದು ಅನುಮಾನವಾಗಿದೆ. ಹೀಗಾಗಿ ಮನೆಯಲ್ಲಿಯೇ ಕುಳಿತು ಪತ್ನಿಯ ನಿರೂಪಣೆ ನೋಡುತ್ತಾ ಟೈಂ ಪಾಸ್ ಮಾಡಿದ್ದಾರೆ.

2021 ರಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಕಳೆದ ವರ್ಷ ಪುತ್ರನ ಜನನವಾಗಿತ್ತು. ಆತನಿಗೆ ಅಂಗದ್ ಎಂದು ನಾಮಕರಣ ಮಾಡಿದ್ದರು. ಇತ್ತೀಚೆಗಷ್ಟೇ ಬುಮ್ರಾ ತಮ್ಮ ಪುತ್ರನನ್ನು ಮೊದಲ ಬಾರಿಗೆ ಮೈದಾನಕ್ಕೆ ಕರೆತಂದಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಡುವು ನೀಡಿದ ಮಳೆರಾಯ, RCB vs PBKS ಪಂದ್ಯಾಟ ಶುರು

IPL 2025: ಆರ್‌ಸಿಬಿ ಅಭಿಮಾನಿಗಳಿಗೆ ಟೆನ್ಷನ್ ಮೇಲೆ ಟೆನ್ಷನ್‌, ಇನ್ನೂ ಶುರುವಾಗದ ಪಂದ್ಯಾಟ

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸೇರಿದ ಬೇಬಿ ಎಬಿ: ಇನ್ನಾದರೂ ಪುಟದೇಳುತ್ತಾ ಧೋನಿ ಪಡೆ

KL Rahul Daughter: ಬರ್ತ್ ಡೇ ದಿನ ಮಗಳ ಹೆಸರು ರಿವೀಲ್ ಮಾಡಿದ ಕೆಎಲ್ ರಾಹುಲ್: ಈ ಹೆಸರಿನಲ್ಲಿದೆ ಒಂದು ವಿಶೇಷ

RCB vs PBKS Match: ಈ ಸಲ ಕಪ್ ನಮ್ದೆ ಎಂದಾಗಲೆಲ್ಲ ನಾವು ಕಪ್ ಎತ್ತಿಲ್ಲ, ಅನಿಲ್ ಕುಂಬ್ಳೆ

ಮುಂದಿನ ಸುದ್ದಿ
Show comments