Publish Date: Sat, 30 May 2026 (16:19 IST)
Updated Date: Sat, 30 May 2026 (16:23 IST)
ಅಹ್ಮದಾಬಾದ್: ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ. ಅದಕ್ಕೆ ಕಾರಣವೇನು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಫನ್ನಿ ವಿಡಿಯೋಗಳು.
ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಗ ಸಾಯಿ ಸುದರ್ಶನ್ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಹಿಟ್ ವಿಕೆಟ್ ಆಗಿ ಔಟ್ ಆಗಿದ್ದಾರೆ. ಬಹುಶಃ ಈ ರೀತಿ ಸತತವಾಗಿ ಹಿಟ್ ವಿಕೆಟ್ ಆದ ಬ್ಯಾಟಿಗರು ತೀರಾ ಅಪರೂಪ ಎನ್ನಬಹುದು.
ಆದರೆ ಆರ್ ಸಿಬಿ ವಿರುದ್ಧ ಮೊದಲ ಕ್ವಾಲಿಫೈಯರ್ ಮತ್ತು ನಿನ್ನೆಯ ಎಲಿಮಿನೇಟರ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಬ್ಯಾಟ್ ಬೀಸಲು ಹೋಗಿ ಅವರ ಕೈಯಿಂದ ಬ್ಯಾಟ್ ಜಾರಿ ಸ್ಟಂಪ್ ಗೆ ಬಿದ್ದು ಔಟಾಗಿದ್ದಾರೆ. ವಿಪರ್ಯಾಸವೆಂದರೆ ಎರಡೂ ಪಂದ್ಯಗಳಲ್ಲಿ ಅವರಿಗೆ ಬ್ಯಾಟ್ ಕೈ ಜಾರಿದೆ.
ಇದರಿಂದ ಅವರು ತೀವ್ರ ನಿರಾಶೆಗೊಳಗಾಗಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಸಾಯಿ ಸುದರ್ಶನ್ ಈ ರೀತಿ ಹಿಟ್ ವಿಕೆಟ್ ಆಗಿರುವುದು ತಂಡಕ್ಕೆ ದೊಡ್ಡ ಸಂಕಷ್ಟ ತಂದಿಟ್ಟಿತ್ತು. ಇದೇ ಕಾರಣಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಸಾಕಷ್ಟು ಮೆಮೆಗಳು, ಫನ್ನಿ ವಿಡಿಯೋಗಳು ಹರಿದಾಡುತ್ತಿವೆ. ಸಾಯಿ ಸುದರ್ಶನ್ ಕೈಗೆ ಬ್ಯಾಟ್ ಮತ್ತು ಗ್ಲೌಸ್ ಸಮೇತ ಬ್ಯಾಂಡೇಜ್ ಸುತ್ತುವ ಫನ್ನಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗುತ್ತಿದ್ದು, ಫೈನಲ್ ಪಂದ್ಯಕ್ಕೆ ಬ್ಯಾಂಡೇಜ್ ಸುತ್ತಿಕೊಂಡೇ ಸಾಯಿ ಸುದರ್ಶನ್ ಕ್ರೀಸ್ ಗಿಳಿಯಲಿದ್ದಾರೆ. ಆಗಲಾದರೂ ಅವರ ಕೈಯಿಂದ ಬ್ಯಾಟ್ ಜಾರದು ಎಂದು ತಮಾಷೆ ಮಾಡುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ