ಕ್ರಿಕೆಟ್ ದೇವರು ಎಂದು ಹೆಸರುವಾಸಿಯಾದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ 19ನೇ ಜನ್ಮ ದಿನ ಆಚರಣೆಯ ಸಂಭ್ರಮದಲ್ಲಿದ್ದಾರೆ. ಸಾರಾ ತಮ್ಮ ಮುಗ್ದ ಸೌಂದರ್ಯ ಮತ್ತು ಸರಳತೆಯಿಂದ ತಂದೆಯಂತೆ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
ಆಧುನಿಕ ಫ್ಯಾಶನ್ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರುವ ಸಾರಾ, ತಮ್ಮ ಪೋಷಕರೊಂದಿಗೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾಳೆ.
ಸಚಿನ್ ಮತ್ತು ಅಂಜಲಿ ತೆಂಡೂಲ್ಕರ್ ಹೆಮ್ಮೆಯ ಪುತ್ರಿಯಾದ ಸಾರಾಳನ್ನು ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಝಾನ್ವಿ ಕಪೂರ್ಳೊಂದಿಗೆ ಹೋಲಿಸಲಾಗುತ್ತದೆ. ಝಾಹ್ನವಿ ಇದೀಗ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ಚಿತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಏತನ್ಮಧ್ಯೆ, ಪುತ್ರಿ ಸಾರಾ ವಿದ್ಯಾಭ್ಯಾಸದಲ್ಲಿ ಮುಂದುವರಿಯಲಿದ್ದು, ಚಿತ್ರರಂಗ ಪ್ರವೇಶಿಸುವ ಯಾವುದೇ ಇರಾದೆ ಹೊಂದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ