Select Your Language

Notifications

webdunia
webdunia
webdunia
webdunia

ಸಚಿನ್, ದ್ರಾವಿಡ್ ಬಿಳಿ ಕೋಟು ಹಾಕಬೇಕೆಂದು ಬಯಸಿದ ಸೈಮನ್ ಟೌಫಲ್

ಸಚಿನ್, ದ್ರಾವಿಡ್ ಬಿಳಿ ಕೋಟು ಹಾಕಬೇಕೆಂದು ಬಯಸಿದ ಸೈಮನ್ ಟೌಫಲ್
ನವದೆಹಲಿ , ಶನಿವಾರ, 30 ಮೇ 2015 (15:36 IST)
ಕ್ರಿಕೆಟರ್ ಆಗುವುದು ಸುಲಭವಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸುವ, ಅಧಿಕ ಸಂಚಲನ ಉಂಟುಮಾಡುವ ಸಮಕಾಲೀನ ಕ್ರಿಕೆಟ್ ಜಗತ್ತಿನಲ್ಲಿ ಪಂದ್ಯದ ಅಂಪೈರಿಂಗ್ ನಿರ್ವಹಿಸುವುದು ಇನ್ನೂ ಕಷ್ಟ. ಐದು ಬಾರಿ ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿ ಗಳಿಸಿರುವ ಸೈಮನ್ ಟೌಫೆಲ್ ಅಂಪೈರ್ ಕೆಲಸದಲ್ಲಿ ತಪ್ಪುಗಳು ಅನಿವಾರ್ಯ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ಸೈಮನ್ ಟೌಫೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಶ್ರೇಷ್ಟ ಅಂಪೈರ್ ಎಂದು ಪರಿಗಣಿತರಾಗಿದ್ದಾರೆ.  ಬಿಸಿಸಿಐನ ಅಂಪೈರ್‌ಗಳ ಎಲೈಟ್ ಸಮಿತಿಗೆ ಸಲಹೆ ಮತ್ತು ಮಾರ್ಗದರ್ಶನ ಮಾಡುವುದಕ್ಕೆ ಭಾರತದಲ್ಲಿರುವ ಟೌಫೆಲ್, ರಾಷ್ಟ್ರೀಯ ಕ್ರಿಕೆಟರುಗಳಿಂದ ಅವರಿಗೆ ಸಿಗಬೇಕಾದ ಗೌರವ ಸಿಗದಿರುವುದರಿಂದ ಭಾರತದ ಸಹೋದ್ಯೋಗಿಗಳು  ಇದೊಂದು ಕಠಿಣ ಕೆಲಸ ಎಂದು ಭಾವಿಸಿದ್ದಾರೆ.
 
ಆಟಗಾರರು ಅಂಪೈರಿಂಗ್ ಎಷ್ಟು ಕಷ್ಟ ಎಂದು ಭಾರತದಲ್ಲಿ ಗೌರವಿಸುವುದನ್ನು ನಾನು ಬಯಸುತ್ತೇನೆ.  ಬಹುಶಃ ಅವರೇ ಅಂಪೈರಿಂಗ್‌ಗೆ ಪ್ರಯತ್ನಿಸಬಹುದು.  ಸಚಿನ್ ತೆಂಡೂಲ್ಕರ್ ಅಥವಾ ರಾಹುಲ್ ದ್ರಾವಿಡ್  ಬಿಳಿಯ ಕೋಟು ಹಾಕುವುದನ್ನು ಕಾಣುವುದು ಮಹತ್ವದ್ದೆನಿಸುತ್ತದೆ ಎಂದು ಟೌಫೆಲ್ ಹೇಳಿದರು. 
 
ಆಟಗಾರರು ಅಂಪೈರಿಂಗ್ ಕೆಲಸದ ಕಷ್ಟದ ಸ್ವರೂಪವನ್ನು ಸಮಾನವಾಗಿ ಗ್ರಹಿಸಲು ನಾವು ಬಯಸುತ್ತೇವೆ ಎಂದು ಇತ್ತೀಚಿನ ದಿನಗಳಲ್ಲಿ ಭಾರತೀಯ ಅಂಪೈರುಗಳ ಪ್ರಗತಿಯನ್ನು ಮೆಚ್ಚಿಕೊಳ್ಳುತ್ತಾ ಅವರು ಹೇಳಿದರು. 
 
 ಎರಡನೇ ಸೀಸನ್‌ನಲ್ಲಿ ನಾನು ಐಪಿಎಲ್ ಸೇರಿದಾಗ ಪ್ಲೇ ಆಫ್‌ನಲ್ಲಿ ಭಾರತೀಯ ಅಂಪೈರ್‍‌ಗಳು ಇರಲಿಲ್ಲ. ಈಗ 6 ವರ್ಷಗಳ ಬಳಿಕ, ಪ್ಲೇ ಆಫ್‌ನಲ್ಲಿ ಭಾಗವಹಿಸಿದ ಅನೇಕ ಭಾರತೀಯ ಅಂಪೈರ್‌ಗಳು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ನುಡಿದರು. 
 
 2004ರಲ್ಲಿ ಶ್ರೀನಿವಾಸನ್ ವೆಂಕಟರಾಘವನ್ ಎಲೈಟ್ ಪ್ಯಾನೆಲ್ ಬಿಟ್ಟ ಬಳಿಕ ಒಬ್ಬರೂ ಭಾರತೀಯ ಅಂಪೈರ್‌ಗಳು ಇರಲಿಲ್ಲ. ನಮ್ಮ ಗಮನವು ಭಾರತದ ದೇಶೀಯ ಅಂಪೈರಿಂಗ್ ಸುಧಾರಣೆ ಮಾಡುವುದಾಗಿದೆ. ನಾವು ನಾಲ್ಕು ಗುಣಮಟ್್ಟದ ಅಂತಾರಾಷ್ಟ್ರೀಯ ಪ್ಯಾನೆಲ್ ಅಂಪೈರ್‌ಗಳನ್ನು ತಯಾರು ಮಾಡಿದ್ದು, ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಅವರಲ್ಲಿ ಎಸ್. ರವಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಟೌಫೆಲ್ ಹೇಳಿದರು. 

Share this Story:

Follow Webdunia kannada