Select Your Language

Notifications

webdunia
webdunia
webdunia
webdunia

ಗಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಸಡನ್ ಎಂಟ್ರಿ ಕೊಟ್ಟ ಸಚಿನ್ ತೆಂಡುಲ್ಕರ್: ಮುಂದೇನಾಯ್ತು video

Sachin Tendulkar gully cricket
Photo Credit: X
ಮುಂಬೈ: ರಾತ್ರಿ ವೇಳೆ ರಸ್ತೆಯಲ್ಲಿ ಕೆಲವು ಯುವಕರು ಗಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಸಡನ್ ಆಗಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಎಂಟ್ರಿ ಕೊಟ್ಟಿದ್ದಾರೆ. ಮುಂದೇನಾಯ್ತು ಇಲ್ಲಿದೆ ವಿಡಿಯೋ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಇಷ್ಟು ದಿನ ಕಳೆದರೂ ಅವರ ಮೇಲಿನ ಕ್ರೇಜ್ ಅಭಿಮಾನಿಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಇಂದಿನ ತಲೆಮಾರಿನ ಕ್ರಿಕೆಟ್ ಅಭಿಮಾನಿಗಳೂ ಅವರು ಮೆಚ್ಚಿನ ಆಟಗಾರರಾಗಿಯೇ ಉಳಿದಿದ್ದಾರೆ.

ಮುಂಬೈನ ರಸ್ತೆಯೊಂದರಲ್ಲಿ ರಾತ್ರಿ ವೇಳೆ ಯುವಕರ ಗುಂಪು ರಸ್ತೆ ಬದಿಯಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿರುತ್ತಾರೆ. ಈ ವೇಳೆ ಅದೇ ರಸ್ತೆಯಲ್ಲಿ ಬರುವ ಸಚಿನ್ ತೆಂಡುಲ್ಕರ್ ಗಲ್ಲಿ ಕ್ರಿಕೆಟ್ ಆಡುತ್ತಿರುವವರನ್ನು ನೋಡಿ ತಮ್ಮ ಕಾರು ನಿಲ್ಲಿಸುತ್ತಾರೆ.

ಬಳಿಕ ಅವರ ಬಳಿ ಹೋಗಿ ಬ್ಯಾಟ್ ಪಡೆದುಕೊಳ್ಳುತ್ತಾರೆ. ಒಂದು ಓವರ್ ನಷ್ಟು ಬ್ಯಾಟಿಂಗ್ ಮಾಡುತ್ತಾರೆ. ಬಳಿಕ ಅಲ್ಲಿದ್ದವರಿಗೆ ಸೆಲ್ಫೀ ನೀಡಿ ಎಲ್ಲರನ್ನೂ ಮಾತನಾಡಿಸಿ ಅಲ್ಲಿಂದ ತೆರಳುತ್ತಾರೆ. ಈ ಹಿಂದೆಯೂ ಸಚಿನ್ ಇದೇ ರೀತಿ ಕಾಶ್ಮೀರಕ್ಕೆ ತೆರಳಿದ್ದಾಗ ರಸ್ತೆ ಬದಿ ಕ್ರಿಕೆಟ್ ಆಡುತ್ತಿದ್ದವರೊಂದಿಗೆ ಸೇರಿಕೊಂಡು ತಾವೂ ಬ್ಯಾಟಿಂಗ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

pic.twitter.com/rmQfc9DUNJ

 

— Akul (????????10) (@Loyalsachfan10) March 14, 2026

Share this Story:

Follow Webdunia kannada

ಮುಂದಿನ ಸುದ್ದಿ

Video: ರೋಹಿತ್ ಶರ್ಮಾ ಎದುರೇ ಅವರ ಮಿಮಿಕ್ರಿ ಮಾಡದಾಗ ರಿಯಾಕ್ಷನ್ ಏನಿತ್ತು ನೋಡಿ