ರಸ್ತೆ ಮಧ್ಯೆ ಕಾರು ನಿಲ್ಲಿಸಿ ಅಭಿಮಾನಿಗೆ ಸರ್ಪೈಸ್ ಕೊಟ್ಟ ಸಚಿನ್ ತೆಂಡುಲ್ಕರ್

Krishnaveni K
ಶುಕ್ರವಾರ, 2 ಫೆಬ್ರವರಿ 2024 (08:50 IST)
Photo Courtesy: Twitter
ಮುಂಬೈ: ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಎಷ್ಟು ಸಮಯ ಕಳೆದರೂ ಅಭಿಮಾನಿಗಳಲ್ಲಿ ಮಾತ್ರ ಅವರ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರಿನಲ್ಲಿ ಸಾಗುವಾಗ ರಸ್ತೆಯಲ್ಲಿ ತಮ್ಮ ಹೆಸರಿನ ಜೆರ್ಸಿ ತೊಟ್ಟು ಸ್ಕೂಟಿಯಲ್ಲಿ ಸಾಗುತ್ತಿದ್ದ ಅಭಿಮಾನಿಯನ್ನು ಕಂಡು ಸ್ವತಃ ಸಚಿನ್ ಕಾರು ನಿಲ್ಲಿಸಿ ಸರ್ಪೈಸ್ ಕೊಟ್ಟಿದ್ದಾರೆ. ರಸ್ತೆ ಮಧ‍್ಯೆ ಅನಿರೀಕ್ಷಿತವಾಗಿ ತನ್ನ ಆರಾಧ‍್ಯ ದೈವವನ್ನು ಕಂಡು ಅಭಿಮಾನಿ ಮಾತು ಹೊರಡದೆ ಅರೆಕ್ಷಣ ಕೈ ಮುಗಿದು ನಿಂತಿದ್ದಾನೆ. ಈ ವಿಡಿಯೋವನ್ನು ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಜೆರ್ಸಿ ತೊಟ್ಟಿದ್ದ ಅಭಿಮಾನಿ ಅದರ ಹಿಂದೆ ತೆಂಡುಲ್ಕರ್ ಎಂದು ಬರೆದು 10 ಸಂಖ್ಯೆಯನ್ನೂ ಹಾಕಿಸಿಕೊಂಡಿದ್ದರು. ಅವರನ್ನೇ ಹಿಂಬಾಲಿಸುತ್ತಿದ್ದ ಸಚಿನ್ ತನ್ನ ಕಾರು ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸಿದ್ದಾರೆ. ಅಭಿಮಾನಿಯನ್ನು ಓವರ್ ಟೇಕ್ ಮಾಡಿ ಕಾರು ನಿಲ್ಲಿಸಿದ ಸಚಿನ್ ತಮಾಷೆಯಾಗಿ ‘ಏರ್ ಪೋರ್ಟ್ ಗೆ ಹೇಗೆ ಹೋಗಬೇಕು’ ಎಂದು ಕೇಳಿದ್ದಾರೆ.

ಯಾರೋ ದಾರಿಹೋಕರು ಎಂದುಕೊಂಡು ಉತ್ತರಕೊಡಲು ಮುಂದಾದ ಅಭಿಮಾನಿ ಸಚಿನ್ ರನ್ನು ನೋಡಿ ಕ್ಷಣ ಕಾಲ ಗರಬಡಿದಂತಾದರು. ಬಳಿಕ ದೇವರನ್ನೇ ನೋಡಿದ ಹಾಗಾಯಿತು ಎಂದು ಕೈ ಮುಗಿದು ನಿಂತಿದ್ದಾರೆ. ವಿಶೇಷವೆಂದರೆ ಆ ಅಭಿಮಾನಿಯ ಸ್ಕೂಟಿಯಲ್ಲಿ ಸಚಿನ್ ಜೊತೆಗಿನ ಹಳೆಯ ಫೋಟೋ, ಆಟೋಗ್ರಾಫ್ ಪುಸ್ತಕ ಎಲ್ಲವೂ ಇತ್ತು. ಅದೆಲ್ಲವನ್ನೂ ತೋರಿಸಿದಾಗ ಸಚಿನ್ ಭಾವುಕರಾದರು. ಜೊತೆಗೆ ಅಭಿಮಾನಿ ಕೈಯಿಂದ ಫೋಟೋ ಪಡೆದು ಈ ಫೋಟೋ ತೆಗೆದಿದ್ದು ನನಗೆ ನೆನಪಿದೆ ಎಂದು ಆ ಫೋಟೋ ಮೇಲೆ ಹಸ್ತಾಕ್ಷರ ನೀಡಿದರು.

ಅಭಿಮಾನಿಯ ಅಭಿಮಾನ ಕಂಡು ಭಾವುಕರಾದ ಸಚಿನ್ ಬಳಿಕ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಲ್ಲದೆ, ‘ಸಚಿನ್ ಮೀಟ್ಸ್ ತೆಂಡುಲ್ಕರ್’ ಎಂದು ಸಂದೇಶವೊಂದನ್ನು ಬರೆದಿದ್ದಾರೆ. ‘ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುವವರನ್ನು ನೋಡುವಾಗ ಎದೆ ತುಂಬಿ ಬರುತ್ತದೆ. ಜಗತ್ತಿನ ಯಾವುದೋ ಮೂಲೆಯಿಂದ ಈ ರೀತಿ ಅನಿರೀಕ್ಷಿತವಾಗಿ ಸಿಗುವ ಪ್ರೀತಿ ನನ್ನ ಜೀವನವನ್ನು ವಿಶೇಷವಾಗಿಸಿದೆ’ ಎಂದು ಭಾವುಕ ಸಾಲುಗಳನ್ನು ಬರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments