ಟಿ20 ವಿಶ್ವಕಪ್ ಮುಗಿಸಿ ಭಾರತಕ್ಕೆ ಬರುತ್ತಿದ್ದಾಗ ವಿಮಾನದಲ್ಲೇ ರಾಹುಲ್ ದ್ರಾವಿಡ್ ಗೆ ಬೈದಿದ್ದರಂತೆ ರೋಹಿತ್ ಶರ್ಮಾ

Krishnaveni K
ಮಂಗಳವಾರ, 30 ಜುಲೈ 2024 (11:20 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡುವೆ ಎಂಥಾ ಬಾಂಧವ್ಯವಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಟಿ20  ವಿಶ್ವಕಪ್ ಫೈನಲ್ ಗೆಲುವಿನ ಬಳಿಕ ತವರಿಗೆ ಮರಳುವಾಗ ದ್ರಾವಿಡ್ ಗೆ ನಾಯಕ ರೋಹಿತ್ ವಿಮಾನದಲ್ಲೇ ಬೈದಿದ್ದರು ಎಂಬ ಅಂಶವನ್ನು ಸ್ಟಾರ್ ಸ್ಪೋರ್ಟ್ಸ್ ನಿರ್ಮಾಪಕರೊಬ್ಬರು ಬಹಿರಂಗಪಡಿಸಿದ್ದಾರೆ.

ಬಾರ್ಬಡೋಸ್ ನಿಂದ ಭಾರತಕ್ಕೆ ಬರಲು ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ವಿಮಾನವನ್ನು ಅರೇಂಜ್ ಮಾಡಲಾಗಿತ್ತು. ಬಾರ್ಬಡೋಸ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿ ಸಿಲುಕಿದ್ದ ಸ್ಟಾರ್ ಸ್ಪೋರ್ಟ್ಸ್ ಸಿಬ್ಬಂದಿ, ಕ್ರೀಡಾ ಪತ್ರಕರ್ತರನ್ನೂ ಇದೇ ವಿಮಾನದಲ್ಲಿ ಕರೆತರಲಾಗಿತ್ತು.

ಈ ವೇಳೆ ತಾವು ಕಂಡ ದೃಶ್ಯವೊಂದನ್ನು ಸ್ಟಾರ್ ಸ್ಪೋರ್ಟ್ಸ್ ನಿರ್ಮಾಪಕರೊಬ್ಬರು ರಿವೀಲ್ ಮಾಡಿದ್ದಾರೆ. ಒಟ್ಟು 16 ಗಂಟೆಗಳ ಪ್ರಯಾಣ ಅದಾಗಿತ್ತು. ಆದರೆ ಆ ಪ್ರಯಾಣದಲ್ಲಿ ಎಲ್ಲರೂ ನಿದ್ರೆ ಮಾಡಿದ್ದು ಬಹುಶಃ ಐದೋ-ಆರೋ ಗಂಟೆಯಷ್ಟೇ. ಉಳಿದೆಲ್ಲಾ ಹೊತ್ತು ಆಟಗಾರರು ಸಂಭ್ರಮಿಸುತ್ತಲೇ ಇದ್ದರು.

ಆದರೆ ಈ ಎಲ್ಲಾ ಗೌಜಿ ಗದ್ದಲಗಳ ರಗಳೆಯೇ ಬೇಡವೆಂದು ಸ್ವಲ್ಪ ಹೊತ್ತು ಮಲಗೋಣವೆಂದು ಕೋಚ್ ದ್ರಾವಿಡ್ ಬ್ಯುಸಿನೆಸ್ ಕ್ಲಾಸ್ ನಿಂದ ಎಕಾನಮಿ ಕ್ಲಾಸ್ ಗೆ ಬಂದಿದ್ದರಂತೆ. ಅಲ್ಲಿದ್ದ ನಾಲ್ಕು ಸೀಟರ್ ಗಳಲ್ಲಿ ದ್ರಾವಿಡ್ ಮಲಗಿ ನಿದ್ರೆ ಮಾಡುತ್ತಿದ್ದರಂತೆ. ಸ್ಟಾರ್ ಸ್ಪೋರ್ಟ್ಸ್ ನಿರ್ಮಾಪಕರೂ ನಿದ್ರೆಯ ಮಂಪರಿನಲ್ಲಿದ್ದರು.

ಆದರೆ ಅಷ್ಟೊತ್ತಿಗೆ ರೋಹಿತ್ ಯಾರಿಗೋ ತಮ್ಮದೇ ಹಾಸ್ಯ ಶೈಲಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಶಬ್ಧ ಕೇಳಿಬಂತಂತೆ. ನೋಡಿದರೆ ಬ್ಯುಸಿನೆಸ್ ಕ್ಲಾಸ್ ಬಿಟ್ಟು ಎಕಾನಮಿ ಕ್ಲಾಸ್ ಗೆ ಬಂದು ಏಕಾಂಗಿಯಾಗಿ ನಿದ್ರೆ ಮಾಡುತ್ತಿದ್ದ ರಾಹುಲ್ ದ್ರಾವಿಡ್ ರನ್ನು ರೋಹಿತ್ ಬೈಯುತ್ತಿದ್ದರಂತೆ. ರೋಹಿತ್ ಬೈಗುಳ ಎಂದರೆ ಎಷ್ಟು ಫನ್ನಿಯಾಗಿರುತ್ತದೆ ಗೊತ್ತಲ್ಲ? ಕೊನೆಗೆ ರೋಹಿತ್ ಹಿಂದೆ, ಹಾರ್ದಿಕ್, ರಿಷಬ್ ಪಂತ್ ಎಲ್ಲರೂ ಬಂದು ದ್ರಾವಿಡ್ ನಿದ್ರೆ ಹಾಳು ಮಾಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ಸ್ಟಾರ್ ಸ್ಪೋರ್ಟ್ಸ್ ನಿರ್ಮಾಪಕರೊಬ್ಬರು ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಮುಂದಿನ ಸುದ್ದಿ
Show comments