ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

Krishnaveni K
ಸೋಮವಾರ, 8 ಡಿಸೆಂಬರ್ 2025 (11:08 IST)
ಮುಂಬೈ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ  ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ದೇಶೀಯ ಕ್ರಿಕೆಟ್ ಟೂರ್ನಿ ಆಡುವಂತೆ ಒತ್ತಡ ಹೇರಲಾಗಿದೆಯೇ? ಈ ಪ್ರಶ್ನೆಗೆ ಬಿಸಿಸಿಐ ಮೂಲಗಳಿಂದ ಸ್ಪಷ್ಟನೆ ಬಂದಿದೆ.

2027 ರ ವಿಶ್ವಕಪ್ ವರೆಗೆ ಏಕದಿನ ಮಾದರಿಯಲ್ಲಿ ಆಡಬೇಕೆನ್ನುವ ಇರಾದೆ ಹೊಂದಿರುವ ರೋಹಿತ್-ಕೊಹ್ಲಿಗೆ ಬಿಸಿಸಿಐ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕು ಎಂದು ಒತ್ತಡ ಹೇರಲಾಗಿದೆ ಎಂಬ ಸುದ್ದಿಗಳಿತ್ತು.  ಈ ಬಗ್ಗೆ ಈಗ ಬಿಸಿಸಿಐ ಮೂಲಗಳಿಂದಲೇ ಸ್ಪಷ್ಟನೆ ಸಿಕ್ಕಿದೆ.

ಇಬ್ಬರಿಗೂ ವಿಜಯ್ ಹಜಾರೆ ಟ್ರೋಫಿ ಆಡುವ ಆಯ್ಕೆ ನೀಡಲಾಗಿದೆಯಷ್ಟೇ ಹೊರತು ಒತ್ತಡವಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಹಾಗಿದ್ದರೂ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ವಿಜಯ್ ಹಜಾರೆ ಟ್ರೋಫಿಗೆ ಲಭ್ಯರಿರುವುದಾಗಿ ತಮ್ಮ ತಂಡಕ್ಕೆ ತಿಳಿಸಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಇತ್ತೀಚೆಗೆ ರಣಜಿ ಟ್ರೋಫಿ ಆಡಿದ್ದು ಬಿಟ್ಟರೆ ದೇಶೀಯ ಕ್ರಿಕೆಟ್ ನಲ್ಲಿ ಆಡಿ ಎಷ್ಟೋ ವರ್ಷಗಳೇ ಆಗಿವೆ. ಇದೀಗ ಏಕದಿನ ಸರಣಿಯಲ್ಲಿ ಮಾತ್ರ ಆಡುತ್ತಿರುವ ಈ ಇಬ್ಬರು ಕ್ರಿಕೆಟಿಗರಿಗೆ ದೇಶೀಯ ಕ್ರಿಕೆಟ್ ಆಡಲು ಹೇಳುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಲಾಶ್ ಜತೆಗಿನ ಮದುವೆ ರದ್ದು ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

ಶುಭಮನ್ ಗಿಲ್ ಗಾಗಿ ಸಂಜು ಸ್ಯಾಮ್ಸನ್ ಸೈಡ್ ಲೈನ್ ಮಾಡಿದ್ರಾ: ನೆಟ್ಟಿಗರ ತರಾಟೆ

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

ಮುಂದಿನ ಸುದ್ದಿ
Show comments