Publish Date: Sat, 15 Jul 2023 (09:27 IST)
Updated Date: Sat, 15 Jul 2023 (09:29 IST)
ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡುವಾಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಗ ಇಶಾನ್ ಕಿಶನ್ ಮೇಲೆ ಸಿಟ್ಟಾದ ಘಟನೆ ನಡೆದಿದೆ.
ವಿರಾಟ್ ಕೊಹ್ಲಿ ಔಟಾದ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಇಶಾನ್ ಕಿಶನ್ ಬ್ಯಾಟಿಂಗ್ ಮಾಡಲಿಳಿದಿದ್ದರು. ಆದರೆ ಇಶಾನ್ ಒಂದು ರನ್ ಮಾಡಲು 20 ಎಸೆತ ತೆಗೆದುಕೊಂಡರು. ಬ್ಯಾಟಿಂಗ್ ಗೆ ಕಾಯುತ್ತಿದ್ದ ಇಶಾನ್ ಗೆ ಅವಕಾಶ ನೀಡಲು ಕೊಹ್ಲಿ ಔಟಾದ ತಕ್ಷಣ ರೋಹಿತ್ ಡಿಕ್ಲೇರ್ ಮಾಡಿಕೊಂಡಿರಲಿಲ್ಲ. ಆದರೆ ಇಶಾನ್ ಖಾತೆ ತೆರೆದ ಮೇಲೆ ಇನಿಂಗ್ಸ್ ಡಿಕ್ಲೇರ್ ಮಾಡಲು ರೋಹಿತ್ ಬಯಸಿದ್ದರು. ಆದರೆ ಇಶಾನ್ ನಿಧಾನಗತಿಯ ಬ್ಯಾಟಿಂಗ್ ರೋಹಿತ್ ಸಿಟ್ಟಿಗೆ ಕಾರಣವಾಯ್ತು.
ಹೀಗಾಗಿ ಪೆವಿಲಿಯನ್ ನಿಂದ ಇಶಾನ್ ಕಡೆಗೆ ಕೊಂಚ ಅಸಮಾಧಾನದಿಂದಲೇ ಸನ್ನೆ ಮಾಡಿದ ರೋಹಿತ್ ರನ್ ಗಳಿಸಲು ಸೂಚನೆ ನೀಡಿದರು. ಇಶಾನ್ 1 ರನ್ ಗಳಿಸುತ್ತಿದ್ದಂತೇ ಇನಿಂಗ್ಸ್ ಡಿಕ್ಲೇರ್ ಮಾಡಿದರು.