Select Your Language

Notifications

webdunia
webdunia
webdunia
webdunia

ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ ಗೆ ಸಿಕ್ಕ ಈ ದುಬಾರಿ ಗಿಫ್ಟ್ ಏನುಗೊತ್ತಾ..?

ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ ಗೆ ಸಿಕ್ಕ ಈ ದುಬಾರಿ ಗಿಫ್ಟ್ ಏನುಗೊತ್ತಾ..?
ಮುಂಬೈ , ಶನಿವಾರ, 15 ಜುಲೈ 2017 (06:49 IST)
ಮುಂಬೈ:ಇಂಡಿಯನ್‌ ಪ್ರಿಮಿಯರ್‌ ಲೀಗ್‌ನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ ಟ್ರೋಫಿಯನ್ನು ಮೂರುಬಾರಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಹತ್ವದ ಗಿಫ್ಟ್ ಒಂದು ದೊರೆತಿದೆ. ಅದೇ ಜಗತ್ತಿನ ಅತ್ಯಂತ ಪ್ರಮುಖವಾದ WWE ಚಾಂಪಿಯನ್ ಶಿಪ್ ಬೆಲ್ಟ್ ಧರಿಸುವ ಭಾಗ್ಯ.
 
ಹೌದು. WWE ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಟ್ರಿಪಲ್ ಹೆಚ್, ಮುಂಬೈ ಇಂದಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಮತ್ತವರ ತಂಡಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಿರುವ WWE ಚಾಂಪಿಯನ್ ಶಿಪ್ ಬೆಲ್ಟ್ ಉಡುಗೊರೆಯಾಗಿ ನೀಡಿದ್ದಾರೆ.
  
ಈ ಬೆಲ್ಟ್ ನಲ್ಲಿ ಮುಂಬೈ ಇಂಡಿಯನ್ಸ್ ಮುದ್ರೆಯನ್ನೂ ಒತ್ತಲಾಗಿರುವುದು ವಿಶೇಷ. ಮೂರನೆ ಬಾರಿ ಮುಂಬೈ ಇಂಡಿಯನ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಾಗ ವಿಶೇಷ ಸಂದೇಶ ರವಾನಿಸಿದ್ದ ಟ್ರಿಪಲ್ ಹೆಚ್ ವಿಶೇಷ ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ಅಂತೆಯೇ ಈಗ ಈ ವಿಷೇಷ ಉಡುಗೊರೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಕ್ಸ್ ಕ್ಯೂಸ್ ಮಿ… ಜಹೀರ್ ಖಾನ್ ಪದವಿಗೆ ಕೊಂಚ ಟ್ವಿಸ್ಟ್ ಕೊಟ್ಟ ಬಿಸಿಸಿಐ