ರೋಹಿತ್ ಶರ್ಮಾ ಎಚ್ಚರಿಕೆಯಿಂದ ಸರ್ಫರಾಜ್ ಖಾನ್ ಪ್ರಾಣ ಉಳಿಯಿತು!

Krishnaveni K
ಭಾನುವಾರ, 10 ಮಾರ್ಚ್ 2024 (12:05 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೀಡಿದ್ದ ಎಚ್ಚರಿಕೆಯೊಂದು ಯುವ ಆಟಗಾರ ಸರ್ಫರಾಜ್ ಖಾನ್ ಪ್ರಾಣ ಉಳಿಸಿದೆ.

ರಾಂಚಿ ಟೆಸ್ಟ್ ಪಂದ್ಯದ ವೇಳೆ ಕ್ರೀಸ್ ಸಮೀಪ ಫೀಲ್ಡಿಂಗ್ ಮಾಡುವಾಗ ಸರ್ಫರಾಜ್ ಖಾನ್ ಹೆಲ್ಮೆಟ್ ಧರಿಸದೇ ಫೀಲ್ಡಿಂಗ್ ಮಾಡಲೆತ್ನಿಸಿದ್ದರು. ಈ ವೇಳೆ ರೋಹಿತ್ ಬೈದು, ಹೀರೋ ಆಗಲು ಹೋಗಬೇಡ, ಮೊದಲು ಹೆಲ್ಮೆಟ್ ಹಾಕು ಎಂದು ಗದರಿದ್ದರು. ಕ್ರೀಸ್ ಗೆ ಸಮೀಪ ಹೆಲ್ಮೆಟ್ ಹಾಕದೇ ಫೀಲ್ಡಿಂಗ್ ಮಾಡುವುದು ಅತ್ಯಂತ ಅಪಾಯಕಾರಿ. ಚೆಂಡು ಬಡಿದು ಪ್ರಾಣಕ್ಕೇ ಎರವಾಗುವ ಅಪಾಯವಿದೆ.

ಹೀಗಾಗಿ ರೋಹಿತ್ ಹಿರಿಯಣ್ಣನಂತೇ ಸರ್ಫರಾಜ್ ಖಾನ್ ಗೆ ಬೈದು ಬುದ್ದಿ ಹೇಳಿದ್ದರು. ಅದು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ನಿಜವಾಗಿದೆ. ರೋಹಿತ್ ಅಂದು ಮಾಡಿದ ಎಚ್ಚರಿಕೆಯಿಂದ ಸರ್ಫರಾಜ್ ಹೆಲ್ಮೆಟ್ ಹಾಕಿಯೇ ಇಲ್ಲಿ ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ ಅವರ ಪ್ರಾಣ ಉಳಿದಿದೆ.

ಕುಲದೀಪ್ ಯಾದವ್ ಬೌಲಿಂಗ್ ಗೆ ಇಂಗ್ಲೆಂಡ್ ನ ಶೊಯೇಬ್ ಬಾಶಿರ್ ಹೊಡೆದ ಚೆಂಡು ಕ್ರೀಸ್ ಸಮೀಪದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಗೆ ಹೆಲ್ಮೆಟ್ ಗೆ ಬಡಿದಿತ್ತು. ಒಂದು ವೇಳೆ ಅವರು ಆ ಕ್ಷಣದಲ್ಲಿ ಹೆಲ್ಮೆಟ್ ಹಾಕಿರದೇ ಇದ್ದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ಊಹಿಸಲೂ ಅಸಾಧ್ಯ. ಹೀಗಾಗಿ ಕ್ರೀಸ್ ಸಮೀಪವಿದ್ದಾಗ ಹೆಲ್ಮೆಟ್ ಹಾಕಬೇಕು ಎಂದು ರೋಹಿತ್ ಹೇಳಿದ್ದ ಬುದ್ಧಿವಾದ ಸರ್ಫರಾಜ್ ಪ್ರಾಣ ಉಳಿಸಿತು ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

IND vs AUS T20: ಟೀಂ ಇಂಡಿಯಾಕ್ಕೆ ಇಂದಿನಿಂದ ಆಸ್ಟ್ರೇಲಿಯಾ ಟಿ20 ಪರೀಕ್ಷೆ

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments