ಮುಂಬೈ: ಟೀಂ ಇಂಡಿಯಾ ರನ್ ಮೆಷಿನ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳ ನಡುವಿನ ವಾರ್ ಇನ್ನೊಂದು ಹಂತಕ್ಕೆ ತಲುಪಿದೆ.
ನಿನ್ನೆಯಷ್ಟೇ ಕೊಹ್ಲಿ ಅಭಿಮಾನಿಯೊಬ್ಬರು ರೋಹಿತ್ ಅಭಿಮಾನಿಯನ್ನು ಕೊಲೆ ಮಾಡಿದ ಘಟನೆ ಚೆನ್ನೈನಲ್ಲಿ ಸಂಚಲನ ಸೃಷ್ಟಿಸಿತ್ತು. ಕುಡಿದ ಮತ್ತಿನಲ್ಲಿ ಕೊಹ್ಲಿ ಅಭಿಮಾನಿಯನ್ನು ರೋಹಿತ್ ಅಭಿಮಾನಿ ಕೆಣಕಿದ್ದಕ್ಕೆ ಕೊಹ್ಲಿ ಅಭಿಮಾನಿ ಕೊಲೆ ಮಾಡಿದ್ದಾನೆ.
ಇದೇ ಕಾರಣಕ್ಕೆ ಕೊಹ್ಲಿಯನ್ನು ಬಂಧಿಸಬೇಕು ಎಂದು ರೋಹಿತ್ ಶರ್ಮಾ ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ. ಇದಕ್ಕೆ ಕೊಹ್ಲಿ ಅಭಿಮಾನಿಗಳೂ ರೋಹಿತ್ ಶರ್ಮಾರನ್ನು ಮೆಮೆ ಮಾಡಿ ತಿರುಗೇಟು ನೀಡಿದ್ದಾರೆ.
-Edited by Rajesh Patil