Publish Date: Fri, 29 May 2026 (19:43 IST)
Updated Date: Fri, 29 May 2026 (19:46 IST)
ಲಖನೌ: ಐಪಿಎಲ್‌ನ ಹಾಲಿ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನಾಯಕ ರಿಷಭ್ ಪಂತ್ ತಲೆದಂಡವಾಗಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಅವರಿಗೆ ಗೇಟ್‌ಪಾಸ್ ನೀಡಲಾಗಿದೆ.
2025ರ ಋತುವಿಗೆ ಮುನ್ನ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ದಾಖಲೆಯ ₹27 ಕೋಟಿ ಮೊತ್ತಕ್ಕೆ ಲಖನೌ ತಂಡವು ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಆಟಗಾರ ಪಡೆದ ಗರಿಷ್ಠ ದಾಖಲೆ ಮೊತ್ತವಾಗಿತ್ತು,
10 ತಂಡಗಳ ಟೂರ್ನಿಯಲ್ಲಿ ಲಖನೌ ತಂಡವು ಕೊನೆಯ ಸ್ಥಾನದೊಂದಿಗೆ ಈ ಬಾರಿಯ ಅಭಿಯಾನ ಮುಗಿಸಿದೆ. ಆಡಿದ 14 ಪಂದ್ಯಗಳ ಪೈಕಿ ನಾಲ್ಕನ್ನು ಮಾತ್ರ ಗೆದ್ದುಕೊಂಡಿದೆ.
ಈ ಋತುವು ಎಡಗೈ ಬ್ಯಾಟರ್ ಪಂತ್ ಅವರಿಗೆ ಶೋಚನೀಯವಾಗಿತ್ತು. ಅವರು 14 ಇನ್ನಿಂಗ್ಸ್‌ಗಳಲ್ಲಿ 28.36ರ ಸರಾಸರಿಯಲ್ಲಿ ಕೇವಲ 312 ರನ್‌ಗಳನ್ನು ಗಳಿಸಿದ್ದಾರೆ.
ಪಂತ್ ಅವರು ಕಳೆದ ಎರಡು ಆವೃತ್ತಿಗಳಲ್ಲಿ ಲಖನೌ ತಂಡವನ್ನು ಮುನ್ನಡೆಸಿದ್ದರು. ಕಳೆದ ಆವೃತ್ತಿಯಲ್ಲೂ ತಂಡವು ಏಳನೇ ಸ್ಥಾನ ಗಳಿಸಿ ನಿರಾಸೆ ಅನುಭವಿಸಿತ್ತು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ