ಆಕ್ಸಿಡೆಂಟ್ ಆದ ಬಳಿಕ ಮೊದಲ ಬಾರಿಗೆ ಕಷ್ಟ ಹೇಳಿಕೊಂಡ ರಿಷಬ್ ಪಂತ್

Webdunia
ಬುಧವಾರ, 1 ಮಾರ್ಚ್ 2023 (09:20 IST)
Photo Courtesy: Twitter
ಮುಂಬೈ: ಕಳೆದ ಡಿಸೆಂಬರ್ ನಲ್ಲಿ ಕಾರು ಅಪಘಾತಕ್ಕೀಡಾಗಿ ಇದೀಗ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಇದೀಗ ತನಗೆ ಸಣ್ಣ ಪುಟ್ಟ ವಿಚಾರಗಳೂ ದೊಡ್ಡ ಸಾಧನೆ ಎನಿಸುತ್ತಿದೆ, ಸಣ್ಣ ವಿಚಾರಗಳೂ ಖುಷಿಕೊಡುತ್ತಿವೆ ಎಂದು ರಿಷಬ್ ಪಂತ್ ಹೇಳಿಕೊಂಡಿದ್ದಾರೆ.

‘ಸದ್ಯಕ್ಕೆ ನಾನು ನನ್ನಷ್ಟಕ್ಕೇ ಬ್ರಷ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದೇ ಖುಷಿಯ ವಿಚಾರ. ಮೊದಲೆಲ್ಲಾ ಸಣ್ಣ ಪುಟ್ಟ ವಿಚಾರದಲ್ಲಿ ಏನಿದೆ ಮಹಾ ಎಂದುಕೊಂಡಿದ್ದೆ. ಆದರೆ ಈಗ ಇಂತಹ ಸಣ್ಣ ಪುಟ್ಟ ವಿಚಾರಗಳೇ ನನಗೆ ಖುಷಿಕೊಡುತ್ತಿವೆ, ಸಾಧನೆ ಎನಿಸುತ್ತಿದೆ. ನಾನೀಗ ಹಣ್ಣುಗಳನ್ನು, ಜ್ಯೂಸ್ ಸೇವಿಸುತ್ತಿದ್ದೇನೆ. ಕೆಲವು ಸಮಯ ಬಿಸಿಲಿಗೆ ಮೈ ಒಡ್ಡಿ ಕೂರುತ್ತೇನೆ. ಸದ್ಯಕ್ಕೆ ಸ್ಟಿಕ್ ಸಹಾಯವಿಲ್ಲದೇ ಸರಿಯಾಗಿ ನಡೆಯುವುದೇ ನನ್ನ ಗುರಿ. ಅಪಘಾತವಾದ ಬಳಿಕ ನಾನು ಪ್ರತೀ ಕ್ಷಣವನ್ನು ದೇವರ ಉಡುಗೊರೆ ಎಂದುಕೊಂಡಿದ್ದೇನೆ. ಪ್ರತೀ ಕ್ಷಣವನ್ನೂ ಎಂಜಾಯ್ ಮಾಡಲು ಕಲಿತಿದ್ದೇನೆ’ ಎಂದಿದ್ದಾರೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಸೌರವ್ ಗಂಗೂಲಿ ಪಂತ್ ಇನ್ನು ಎರಡು ವರ್ಷ ಕ್ರಿಕೆಟ್ ಆಡಲು ಸಾಧ‍್ಯವಾಗದು ಎಂದಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬಗ್ಗೆ ಬಂದ ರೂಮರ್ ಗಳಿಗೆ ಮುಂಬೈ ಇಂಡಿಯನ್ಸ್ ಮಹತ್ವದ ಹೇಳಿಕೆ

INDW vs AUSW: ಪಂದ್ಯಾಟದ ವೇಳೇ ಯಾಕೆ ಕಪ್ಪು ಪಟ್ಟಿ ಕಟ್ಟಿದ ಆಟಗಾರ್ತಿಯರು

INDW vs AUSW: ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತ ವನಿತೆಯರಿಗೆ ಸಂಕಷ್ಟ

ಕೋಮಾದಿಂದ ಚೇತರಿಸಿಕೊಂಡ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅಭಿಮಾನಿಗಳಿಗೆ ಮೊದಲ ಸಂದೇಶ

ಕೆಎಲ್ ರಾಹುಲ್ ಸು ಫ್ರಮ್ ಸೊ ಮೂವಿ ನೋಡಿದ್ದಾರೆ, ಆದ್ರೆ ಗರುಡ ಗಮನ ಸಿನಿಮಾ ಗೊತ್ತೇ ಇಲ್ವಂತೆ

ಮುಂದಿನ ಸುದ್ದಿ
Show comments