ನವದೆಹಲಿ: ರಸ್ತೆ ಅಪಘಾತದಿಂದಾಗಿ ಕಾಲು ಮುರಿದುಕೊಂಡಿರುವ ರಿಷಬ್ ಪಂತ್ ಈ ಬಾರಿ ಐಪಿಎಲ್ ನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟಿಲ್ಲ!
ಈ ಬಾರಿಯ ಐಪಿಎಲ್ ನಲ್ಲಿ ರಿಷಬ್ ಭಾಗಿಯಾಗಲಿದ್ದಾರೆ! ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಆಡುವ ಪಂದ್ಯಕ್ಕೆ ರಿಷಬ್ ಹಾಜರಿದ್ದು, ಪಂದ್ಯ ವೀಕ್ಷಿಸಲಿದ್ದಾರೆ. ಇದಕ್ಕೆ ಡೆಲ್ಲಿ ತಂಡ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಿದೆ.
ರಿಷಬ್ ಸದ್ಯಕ್ಕೆ ಕ್ರಿಕೆಟ್ ಆಡಲು ಸಾಧ‍್ಯವಾಗಲ್ಲ. ಆದರೆ ಅವರ ಫ್ಯಾನ್ಸ್ ರಿಷಬ್ ಮೈದಾನದಲ್ಲಿ ಹಾಜರಿರುವುದನ್ನು ನೋಡಿದರೆ ಖುಷಿಪಡುವುದು ಖಂಡಿತಾ.