ಮೊಹಮ್ಮದ್ ಸಿರಾಜ್ ಗೆ ಮೈದಾನದಲ್ಲೇ ಕ್ಷಮೆ ಕೇಳಿದ ರಿಷಬ್ ಪಂತ್: ಅಂತಹದ್ದೇನಾಯ್ತು

Krishnaveni K
ಶುಕ್ರವಾರ, 20 ಸೆಪ್ಟಂಬರ್ 2024 (11:58 IST)
ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ
ಇಂದು ಭಾರತೀಯ ಬೌಲರ್ ಮೊಹಮ್ಮದ್ ಸಿರಾಜ್ ಗೆ ಅನ್ಯಾಯವಾಗಿದ್ದಕ್ಕೆ ವಿಕೆಟ್ ಕೀಪರ್ ರಿಷಬ್ ಪಂತ್ ಮೈದಾನದಲ್ಲೇ ಕ್ಷಮೆ ಕೇಳಿದರು. ಅಷ್ಟಕ್ಕೂ ಅಂತಹದ್ದೇನಾಯ್ತು ಇಲ್ಲಿದೆ ನೋಡಿ ವಿವರ.

ಎರಡನೇ ದಿನವಾದ ಇಂದು ಭಾರತ ಮೊದಲ ಇನಿಂಗ್ಸ್ ನಲ್ಲಿ 376 ರನ್ ಗಳಿಗೆ ಆಲೌಟ್ ಆಯಿತು. ನಿನ್ನೆ 86 ರನ್ ಗಳಿಸಿ ಶತಕದ ನಿರೀಕ್ಷೆಯಲ್ಲಿದ್ದ ರವೀಂದ್ರ ಜಡೇಜಾ ಇಂದು ಒಂದೂ ರನ್ ಗಳಿಸದೇ ಔಟಾದರು. ಇದರಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಆದರೆ ಅಶ್ವಿನ್ ಅಂತಿಮವಾಗಿ 113 ರನ್ ಗಳಿಸಿ ಔಟಾದರು.

ಇದೀಗ ಬಾಂಗ್ಲಾ ಮೊದಲ ಇನಿಂಗ್ಸ್ ಆರಂಭಿಸಿದ್ದು ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ನಲ್ಲೇ ಶದ್ಮಾನ್ ಇಸ್ಲಾಮ್ ರನ್ನು 2 ರನ್ ಗೆ ಕ್ಲೀನ್ ಬೌಲ್ಡ್ ಮಾಡಿದರು. ಅದಾದ ಬಳಿಕ ಆಕಾಶ್ ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.

ಆದರೆ ಈ ನಡುವೆ ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಸಿಗಬೇಕಿತ್ತು. ಅವರು ಎಸೆದ ಎಸೆತವೊಂದು ಎಲ್ ಬಿಡಬ್ಲ್ಯು ಆಗುವುದರಲ್ಲಿತ್ತು. ಆದರೆ ಅಂಪಾಯರ್ ನಾಟೌಟ್ ನೀಡಿದರು. ವಿಕೆಟ್ ಕೀಪರ್ ರಿಷಬ್ ಪಂತ್ ಸಲಹೆ ಕೇಳಿದ ನಾಯಕ ರೋಹಿತ್ ಶರ್ಮಾ ಬಾಲ್ ಹೈಟ್ ಲ್ಲಿತ್ತು ಎಂದು ಡಿಆರ್ ಎಸ್ ಗೂ ಮನವಿ ಸಲ್ಲಿಸಲಿಲ್ಲ. ಆದರೆ ಟಿವಿ ರಿಪ್ಲೇ ನೋಡಿದಾಗ ಎಲ್ ಬಿ ಆಗಿದ್ದು ಸ್ಪಷ್ಟವಾಗಿತ್ತು.

ಹೀಗಾಗಿ ಮೊಹಮ್ಮದ್ ಸಿರಾಜ್ ಹತಾಶರಾದರೆ, ಇತ್ತ ರಿಷಬ್ ಪಂತ್ ಸರಿಯಾಗಿ ಸಲಹೆ ನೀಡದೇ ಇದ್ದಿದ್ದಕ್ಕೆ ಮೈದಾನದಲ್ಲೇ ಕೈ ಎತ್ತಿ ಸಿರಾಜ್ ಗೆ ಕ್ಷಮೆ ಕೇಳಿದರು. ಅತ್ತ ರೋಹಿತ್ ಕೂಡಾ ಹತಾಶೆಗೊಂಡು ಒಂದು ಸ್ಮೈಲ್ ಕೊಟ್ಟರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಟೀಂ ಇಂಡಿಯಾ ಮುಂದಿನ ಸರಣಿಯ ವೇಳಾಪಟ್ಟಿ ಇಲ್ಲಿದೆ

ಅತ್ಯಾಚಾರ ಪ್ರಕರಣ: ದೆಹಲಿ ಕ್ಯಾಪಿಟಲ್ಸ್‌ ವಿಕೆಟ್ ಕೀಪರ್‌ ಅಭಿಷೇಕ್ ಪೊರೆಲ್‌ಗೆ ಬಂಧನ ಭೀತಿ

ಪ್ರಯಾಣದಲ್ಲಿ ದೊರೆತ ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಿ, ವಿಶ್ರಾಂತಿ ಪಡೆಯಿರಿ: ಮೆಸ್ಸಿ ಆಟದ ಬಗ್ಗೆ ಬಿಗ್‌ಬಿ ಹೇಳಿದ್ದಿಷ್ಟು

ಮುಂದಿನ ಸುದ್ದಿ
Show comments