Webdunia - Bharat's app for daily news and videos

Install App

ಟೀಂ ಇಂಡಿಯಾ ಹೊಟೆ‌‍ಲ್‌ನಲ್ಲಿ ಜಿಂಬಾಬ್ವೆ ಮಹಿಳೆ ಮೇಲೆ ರೇಪ್: ಇಬ್ಬರ ಬಂಧನ

Webdunia
ಸೋಮವಾರ, 20 ಜೂನ್ 2016 (14:22 IST)
ರೇಪ್ ಆರೋಪಗಳ ಮೇಲೆ ಭಾರತೀಯ ಕ್ರಿಕೆಟ್ ಆಟಗಾರನನ್ನು ಬಂಧಿಸಲಾಗಿದೆ ಎಂದು ಜಿಂಬಾಬ್ವೆ ಮಾಧ್ಯಮ ವರದಿಗಳನ್ನು ಪ್ರಕಟಿಸಿದ ಬಳಿಕ ಭಾರೀ ವಿವಾದ ಸ್ಫೋಟಿಸಿತ್ತು. ಆ ಸುದ್ದಿ ವರದಿಯಾದ ಕ್ಷಣದಲ್ಲಿ ಭಯ ಆವರಿಸಿದರೂ, ಆರೋಪಿ ಕ್ರಿಕೆಟರ್ ಅಥವಾ ತಂಡದ ಅಧಿಕಾರಿಯಲ್ಲ, ಆದರೆ ಸರಣಿಯ ಪ್ರಾಯೋಜನೆಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದ ಎಂಬ ವಿಷಯ ಬಹಿರಂಗವಾಯಿತು.
 
ಆದಾಗ್ಯೂ ಇನ್ನೊಂದು ಪತ್ರಿಕೆಯಲ್ಲಿ ಈ ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಹರಾರೆ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಯಿತು.
 
ಆದರೆ ಬಂಧಿತರಾದ ವ್ಯಕ್ತಿಗಳನ್ನು ಐಟಿಡಬ್ಲ್ಯು ಸ್ಫೋರ್ಟ್ಸ್‌ಗೆ ಸಂಬಂಧಿಸಿದ ಕೃಷ್ಣ ಸತ್ಯನಾರಾಯಣ್ ಮತ್ತು ಜಾಂಬಿಯಾ ಮೂಲದ ಉದ್ಯಮಿ ರಾಜಕುಮಾರ್ ಕೃಷ್ಣನ್ ಎಂದು ಗುರುತಿಸಲಾಗಿದೆ. 
 
ಇವರಿಬ್ಬರನ್ನು ರೇಪ್ ಆರೋಪಗಳ ಮೇಲೆ ಬಂಧಿಸಲಾಗಿದೆ. ಯುವತಿ ದಕ್ಷಿಣ ಆಫ್ರಿಕಾ ಮೂಲದವಳಾಗಿದ್ದು ಅಂತ್ಯಕ್ರಿಯೆ ಸಲುವಾಗಿ ಇಲ್ಲಿಗೆ ಆಗಮಿಸಿ ಅವರಿಬ್ಬರು ಆರೋಪಿಗಳು ತಂಗಿದ್ದ ಹೊಟೆಲ್‌ನಲ್ಲೇ ತಂಗಿದ್ದಾಗ ಅತ್ಯಾಚಾರಕ್ಕೆ ಒಳಗಾಗಿದ್ದಳು.
ಇಬ್ಬರನ್ನು ಕೋರ್ಟ್‌ಗೆ ಒಯ್ಯಲಾಗಿದ್ದು ನಿನ್ನೆ ಕಸ್ಟಡಿಗೆ ಒಪ್ಪಿಸಲಾಗಿದೆ.

ಸೋಮವಾರ ಅವರು ಹೈಕೋರ್ಟ್‍‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಜಿಂಬಾಬ್ವೆ ರಿಪಬ್ಲಿಕ್ ಪೊಲೀಸ್ ಹಿರಿಯ ಸಹಾಯಕ ಕಮೀಷನರ್ ತಿಳಿಸಿದರು. ಇವರಿಬ್ಬರು ಮೇಕ್ಲೇಸ್ ಹೊಟೆಲ್‌ನಲ್ಲಿ ತಂಗಿದ್ದಾಗ ಯುವತಿ ಮೇಲೆ ರೇಪ್ ಮಾಡಿದ್ದರು. ಅದೇ ಕಟ್ಟಡದಲ್ಲಿ ಭಾರತೀಯ ಆಟಗಾರರು ಕೂಡ ತಂಗಿದ್ದರಿಂದ ಗೊಂದಲ ಉಂಟಾಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments