ಪ್ರಧಾನಮಂತ್ರಿ ನರೇಂದ್ರ ಮೋದಿ ಮೊಟ್ಟೆಯಂತೆ, ಅದಕ್ಕೆ ತಂದೆಯಿಲ್ಲ, ತಾಯಿಯೂ ಇಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಂದಾದ್ ಸೊಕ್ಕಿನ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಿಯಂದಾದ್, ಭಾರತದಲ್ಲಿ ಕೆಲವರು ನಿಮ್ಮನ್ನು ಹತ್ಯೆ ಮಾಡಲು ಬಯಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ನೀವೆಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.
ನಾನು ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿದ್ದಾಗ ಭಾರತದ ಹಲವಾರು ನಗರಗಳ ಪ್ರವಾಸ ಮಾಡಿದ್ದೇನೆ. ಸಾಮಾನ್ಯ ಜನತೆಗೆ ಪಾಕ್ ವಿರುದ್ಧ ಯಾವುದೇ ಕೆಟ್ಟಭಾವನೆಗಳಿಲ್ಲ. ಆದರೆ, ತಂದೆ, ತಾಯಿಯಲ್ಲದ ಮೊಟ್ಟೆಯಂತಿರುವ ಪ್ರಧಾನಿ ನರೇಂದ್ರ ಮೋದಿಯಂತವರು ತುಂಬಾ ಜನರಿದ್ದಾರೆ ಎಂದರು.
ಪ್ರಧಾನಿ ಮೋದಿ ಯಾರನ್ನು ಹೆದರಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಾವು ಯುದ್ಧಕ್ಕೆ ಸಿದ್ದರಾಗಿದ್ದೇವೆ. ಸಾಯಲು ಸಿದ್ದ ಪಾಕಿಸ್ತಾನದ ಪ್ರತಿಯೊಬ್ಬ ವ್ಯಕ್ತಿ ಕೂಡಾ ಭಾರತದ ವಿರುದ್ಧದ ಪವಿತ್ರ ಯುದ್ಧದಲ್ಲಿ ಭಾಗಿಯಾಗಲು ಸಿದ್ದನಾಗಿದ್ದಾನೆ. ಭಾರತ ಹೇಡಿಗಳ ದೇಶ, ಭಾರತದಲ್ಲಿ ಸೇನೆ ಕೂಡಾ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದೊಂದಿನ ಪಂದ್ಯವಾಗಲಿ ಅಥವಾ ಗಡಿತಂಟೆಯಾಗಲಿ ರೋಚಕವಾಗಿದ್ದು ಮಾಧ್ಯಮಗಳ ಗಮನ ಸೆಳೆಯುತ್ತಿರುತ್ತದೆ.
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ 19 ಸೈನಿಕರ ಹತ್ಯೆಗೆ ಕಾರಣವಾದ ನಂತರ ಉಭಯ ದೇಶಗಳ ನಡುವೆ ಸಾಮರಸ್ಯ ಮತ್ತಷ್ಟು ಹದಗೆಟ್ಟಿದೆ.
ಉರಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದೊಳಗಿರುವ ಉಗ್ರರ ಶಿಬಿರಗಳಿಗೆ ನುಗ್ಗಿ ಸೀಮಿತ ದಾಳಿ ನಡೆಸಿ 45 ಉಗ್ರರ ಮಾರಣಹೋಮ ನಡೆಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ