Webdunia - Bharat's app for daily news and videos

Install App

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

Krishnaveni K
ಮಂಗಳವಾರ, 27 ಮೇ 2025 (09:35 IST)
Photo Credit: X
ಲಕ್ನೋ: ಐಪಿಎಲ್ 2025 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಪಂದ್ಯವಾಡಲಿದ್ದು ಇಂದಿನ ಪಂದ್ಯವನ್ನು ಆರ್ ಸಿಬಿ ಸೋಲುವಂತೆಯೇ ಇಲ್ಲ.

ಕಳೆದ ಪಂದ್ಯವನ್ನೂ ಆರ್ ಸಿಬಿ ಲಕ್ನೋ ಮೈದಾನದಲ್ಲೇ ಆಡಿತ್ತು. ಆದರೆ ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ತವರಿನ ಹೊರತಾದ ಅಂಕಣದಲ್ಲಿ ಸೋತು ಆಘಾತ ಅನುಭವಿಸಿತ್ತು. ಟೇಬಲ್ ಟಾಪರ್ ಆಗುವ ಅವಕಾಶ ಹೊಂದಿದ್ದ ಆರ್ ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಇದೀಗ ಪ್ಲೇ ಆಫ್ ಹಂತಕ್ಕೇರಿರುವ ಆರ್ ಸಿಬಿ ಅಗ್ರ ಸ್ಥಾನ ಕಾಯ್ದುಕೊಳ್ಳಬೇಕು ಎಂದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಇಂದು ಸೋತರೆ ಆರ್ ಸಿಬಿ ಕ್ವಾಲಿಫೈಯರ್ ಬದಲು ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ. ಹೀಗಾಗಿ ಆರ್ ಸಿಬಿ ಪಾಲಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿರಲಿದೆ.  ಆರ್ ಸಿಬಿ ಈಗ ಮೂವರು ಆಟಗಾರರು ಸೇರ್ಪಡೆಯಾಗಿರುವುದು ಹೊಸ ಚೈತನ್ಯ ಮೂಡಿಸಿದಂತಾಗಿದೆ.

ಕಳೆದ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ಅನುಪಸ್ಥಿತಿಯಲ್ಲಿ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಅವರ ಕೆಲವು ನಿರ್ಧಾರಗಳು ಟೀಕೆಗೂ ಒಳಗಾಗಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ತಪ್ಪುಗಳನ್ನು ತಿದ್ದಿಕೊಂಡು ಆಡದೇ ಹೋದಲ್ಲಿ ನಿರ್ಣಾಯಕ ಹಂತದಲ್ಲಿ ಬೀಳುವ ಚಾಳಿ ಮುಂದುವರಿಸಿದಂತಾಗುತ್ತದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

RCB Bengaluru stampede: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಸಾವು, ನಮ್ಮ ಮೆಟ್ರೋ ಸ್ಥಗಿತ

RCB Victory Parade: M.ಚಿನ್ನಸ್ವಾಮಿಗೆ ಉಚಿತ ಪಾಸ್‌ಗಳು ಲಭ್ಯ

RCB in Bengaluru: ಆಹಾ ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಚಂದ video

ಮುಂದಿನ ಸುದ್ದಿ
Show comments