ಆರ್ ಸಿಬಿ ಅನ್ ಬಾಕ್ಸ್ ನಲ್ಲಿ ಇಂದು ಸ್ಮೃತಿ ಮಂಧಾನ ಪಡೆಯೇ ಆಕರ್ಷಣೆ

Krishnaveni K
ಮಂಗಳವಾರ, 19 ಮಾರ್ಚ್ 2024 (12:26 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಐಪಿಎಲ್ ಆರಂಭಕ್ಕೆ ಮುನ್ನ ಅಭಿಮಾನಿಗಳೊಂದಿಗೆ ಕೆಲವು ಕಾಲ ಕಳೆಯಲಿದೆ. ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.

ಈ ಬಾರಿ ಆರ್ ಸಿಬಿ ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ಸಂಭ್ರಮಿಸಲು ಕಾರಣ ಹೆಚ್ಚಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್ ನಲ್ಲಿ ಸ್ಮೃತಿ ಮಂಧಾನ ಪಡೆ ಚಾಂಪಿಯನ್ ಆಗಿರುವುದು ಆರ್ ಸಿಬಿ ಸಂಭ್ರಮ ಹೆಚ್ಚಲು ಕಾರಣವಾಗಿದೆ. ಡಬ್ಲ್ಯುಪಿಎಲ್ ಚಾಂಪಿಯನ್ನರನ್ನು ಬರಮಾಡಿಕೊಳ್ಳಲು ಚಿನ್ನಸ್ವಾಮಿ ಪ್ರೇಕ್ಷಕರು ಕಾದಿದ್ದಾರೆ.

ಸ್ಮೃತಿ ಮಂಧಾನ ಹಾಗೂ ಆರ್ ಸಿಬಿ ಮಹಿಳಾ ತಂಡಕ್ಕೆ ಇಂದು ಮೈದಾನದಲ್ಲಿ ಅಭಿನಂದನೆ ಕಾರ್ಯಕ್ರಮವಿರಲಿದೆ. ಜೊತೆಗೆ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್ ಸೇರಿದಂತೆ ಐಪಿಎಲ್ ತಂಡವೂ ಮೈದಾನದಲ್ಲಿರಲಿದೆ. ಇದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಹಬ್ಬವಾಗಲಿದೆ.

ಜೊತೆಗೆ ಅಭಿಮಾನಿಗಳ ಖುಷಿ ಹೆಚ್ಚಿಸಲು ಕನ್ನಡಿಗ ರಘು ದೀಕ್ಷಿತ್ ಸೇರಿದಂತೆ ಖ್ಯಾತ ಗಾಯಕರಿಂದ ಲೈವ್ ಶೋ ಕೂಡಾ ಇರಲಿದೆ. ಈಗಾಗಲೇ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಅಭಿಮಾನಿಗಳಿಂದ ಮೈದಾನ ಭರ್ತಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಮುಂದಿನ ಸುದ್ದಿ
Show comments