Daily Horoscope
✕

ಆರ್ ಸಿಬಿ ಮ್ಯಾಚ್ ನೋಡುವ ಟಿಕೆಟ್ ದರದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು

Krishnaveni K
ಶುಕ್ರವಾರ, 5 ಸೆಪ್ಟಂಬರ್ 2025 (10:13 IST)

ಬೆಂಗಳೂರು: ಜಿಎಸ್ ಟಿ ನಿಯಮದಲ್ಲಿ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ತಂದಿದ್ದು ಮಧ್ಯಮ ವರ್ಗದವರು ಉಪಯೋಗಿಸುವ ವಸ್ತುಗಳ ಬೆಲೆ ಕಡಿಮೆಯಾಗಿದೆ. ಆದರೆ ಐಪಿಎಲ್ ಟಿಕೆಟ್ ದರದ ಮೇಲಿದ್ದ ಜಿಎಸ್ ಟಿ ಹೆಚ್ಚಾಗಿದ್ದು ಆರ್ ಸಿಬಿ ಮ್ಯಾಚ್ ನೋಡುವ ಹಣದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು.

ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ದರ ಯಾವತ್ತೂ ಬಲು ದುಬಾರಿಯೇ. ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ದುಬಾರಿಯಾಗಿದ್ದು ಐಪಿಎಲ್ ಟಿಕೆಟ್ ದರ ಆರಂಭಿಕ ಬೆಲೆಯೇ 600 ರೂ. ನಿಂದ ಇರುತ್ತಿತ್ತು. ಇದುವರೆಗೆ ಐಪಿಎಲ್ ಟಿಕೆಟ್ ದರ 28% ಜಿಎಸ್ ಟಿ ಸ್ಲ್ಯಾಬ್ ನಲ್ಲಿ ಬರುತ್ತಿತ್ತು.

ಹೀಗಿದ್ದಾಗ 500 ರೂ. ಟಿಕೆಟ್ ದರವಿದ್ದರೆ ಜಿಎಸ್ ಟಿ ಸೇರಿ 640 ರೂ. ಆಗುತ್ತಿತ್ತು. ಆದರೆ ಈಗ 28% ಜಿಎಸ್ ಟಿ ಸ್ಲ್ಯಾಬ್ ರದ್ದಾಗಿದೆ. ಇದೀಗ ಐಪಿಎಲ್ ಟಿಕೆಟ್ ದರವನ್ನು 40% ಜಿಎಸ್ ಟಿ ಸ್ಲ್ಯಾಬ್ ಗೆ ಸೇರಿಸಲಾಗಿದೆ. ಹೀಗಾಗಿ ಐಪಿಎಲ್ ಟಿಕೆಟ್ ಗಳು ಇನ್ನಷ್ಟು ದುಬಾರಿಯಾಗಲಿದೆ.

ಅಂದರೆ 500 ರೂ. ಟಿಕೆಟ್ ದರವಿದ್ದರೆ ಇನ್ನು 700 ರೂ. ಗೆ ಏರಿಕೆಯಾಗಲಿದೆ. ಇದು ಕನಿಷ್ಠ ದರ. ಕಳೆದ ಸೀಸನ್ ನಲ್ಲಿ ಒಂದು ಟಿಕೆಟ್ ದರ 40 ಸಾವಿರ ರೂ.ವರೆಗೆ ಮಾರಾಟವಾಗಿದ್ದೂ ಇದೆ. ಹೀಗಾದಲ್ಲಿ ಬರೋಬ್ಬರಿ 4,000 ರೂ. ಹೆಚ್ಚು ಪಾವತಿ ಮಾಡಬೇಕು. ಹೀಗಾಗಿ 2026 ನೇ ಆವೃತ್ತಿಯಿಂದ ಐಪಿಎಲ್ ಟಿಕೆಟ್ ಮಧ್ಯಮವರ್ಗದವರಿಗೆ ಹೊರೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗಾಯವಾಗಿರುವ ಇಶಾನ್ ಕಿಶನ್ ಗೆ ಸಂಜು ಸ್ಯಾಮ್ಸನ್ ಎತ್ತಲು ಸಾಧ್ಯವಾಗಿದ್ದು ಹೇಗೆ: ನೆಟ್ಟಿಗನ ಪ್ರಶ್ನೆ

ಭಾರತ vs ಜಿಂಬಾಬ್ವೆ ಮಹಿಳೆಯರು 2ನೇ ಏಕದಿನ: ಪಂದ್ಯ ಆರಂಭ ಸಮಯ, ನೇರಪ್ರಸಾರ ವಿವರ ಇಲ್ಲಿದೆ

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಕಾಣುತ್ತಿದ್ದಂತೇ ತಿಲಕ್ ವರ್ಮ, ನಿತೀಶ್ ಸುತ್ತುವರಿದ ಭದ್ರತಾ ಸಿಬ್ಬಂದಿಗಳು Video

IND vs NZ 2nd T20: ನಂಬಲಸಾಧ್ಯ ಗೆಲುವು ದಾಖಲಿಸಿದ ಟೀಂ ಇಂಡಿಯಾ, ತಿಲಕ್ ವರ್ಮ, ನಮನ್ ಧೀರ್ ಮ್ಯಾಜಿಕ್

ಭಾರತ vs ನ್ಯೂಜಿಲ್ಯಾಂಡ್ 2ನೇ T20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ

ಮುಂದಿನ ಸುದ್ದಿ
Show comments