Webdunia - Bharat's app for daily news and videos

Install App

ಡಬ್ಲ್ಯುಪಿಎಲ್ ಪಂದ್ಯದ ವೇಳೆ ಆರ್ ಸಿಬಿ ಸ್ಟಾರ್ ಶ್ರೇಯಾಂಕ ಪಾಟೀಲ್ ಗೆ ಮದುವೆ ಪ್ರಪೋಸಲ್

Krishnaveni K
ಬುಧವಾರ, 28 ಫೆಬ್ರವರಿ 2024 (12:28 IST)
Photo Courtesy: Twitter
ಬೆಂಗಳೂರು: ಮಹಿಳಾ ಕ್ರಿಕೆಟ್ ನ ಹೊಸ ಕ್ರಶ್ ಕನ್ನಡತಿ ಶ್ರೇಯಾಂಕ ಪಾಟೀಲ್. ಡಬ್ಲ್ಯುಪಿಎಲ್ ಟೂರ್ನಿ ವೇಳೆ ಆರ್ ಸಿಬಿ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಗೆ ಅಭಿಮಾನಿಯೊಬ್ಬ ಮದುವೆ ಮಾಡಿಕೊಳ್ಳುವಂತೆ ಪ್ರಪೋಸ್ ಮಾಡಿದ್ದಾನೆ.

ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಗುಜರಾತ್ ಜೈಂಟ್ಸ್‍ ತಂಡದ ವಿರುದ್ಧ ಆರ್ ಸಿಬಿ ಪಂದ್ಯವಿತ್ತು. ಈ  ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯ ನೋಡಲು ಸೇರಿದ್ದರು. ಇವರ ಮಧ್ಯೆ ಆರ್ ಸಿಬಿ ಜೆರ್ಸಿ ತೊಟ್ಟಿದ್ದ ಅಭಿಮಾನಿ ಯುವಕನೊಬ್ಬ ಶ್ರೇಯಾಂಕ ಪಾಟೀಲ್ ಗೆ ಪ್ರಪೋಸ್ ಮಾಡಿದ್ದಾನೆ.

ಶ್ರೇಯಾಂಕ ಪಾಟೀಲ್ ‘ವಿಲ್ ಯೂ ಮ್ಯಾರೀ ಮೀ. ಫ‍್ರಂ ಉತ್ತರ ಕರ್ನಾಟಕ'’ ಎಂದು ಪೋಸ್ಟರ್ ಒಂದನ್ನು ಹಿಡಿದು ತೋರಿಸುತ್ತಿದ್ದ. ಈ ಯುವಕನ ಪೋಸ್ಟರ್ ಕಂಡ ಕ್ಯಾಮರಾ ಕಣ್ಣುಗಳು ಅತ್ತ ಫೋಕಸ್ ಮಾಡಿದ್ದವು. ಇದನ್ನು ಡಗ್ ಔಟ್ ನಲ್ಲಿ ಕುಳಿತಿದ್ದ ಆರ್ ಸಿಬಿ ಆಟಗಾರ್ತಿಯರೂ ಗಮನಿಸಿದ್ದಾರೆ. ಇಂತಹದ್ದೊಂದು ಪ್ರಪೋಸ್ ಪೋಸ್ಟರ್ ನೋಡಿ ಆರ್ ಸಿಬಿ ಆಟಗಾರ್ತಿಯರ ಮುಖದಲ್ಲಿ ನಗುವೋ ನಗು.

ಆರ್ ಸಿಬಿ ಪಂದ್ಯವೆಂದರೆ ಮೊದಲು ಸ್ಮೃತಿ ಮಂಧಾನಾ, ಎಲ್ಸಿ ಪೆರಿ ನೋಡಲೆಂದೇ ಜನ ಬರುತ್ತಿದ್ದರು. ಸ್ಮೃತಿ ಮಂಧಾನಾ ಎಲ್ಲರ ಕ್ರಶ್. ಆದರೆ ಇದೀಗ ಕ್ರಶ್ ಲಿಸ್ಟ್ ಗೆ ಅಪ್ಪಟ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡಾ ಸೇರ್ಪಡೆಯಾಗಿದ್ದಾರೆ. ಅವರನ್ನೂ ಫಾಲೋ ಮಾಡುವ ಅಭಿಮಾನಿಗಳ ಬಳಗವೇ ಇದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments