Select Your Language

Notifications

webdunia
webdunia
webdunia
webdunia

ಸ್ಟೀವ್ ಸ್ಮಿತ್ ದ್ವಿಶತಕದ ಕನಸಿಗೆ ರವೀಂದ್ರ ಜಡೇಜಾ ಅಡ್ಡಿ!

ಸ್ಟೀವ್ ಸ್ಮಿತ್ ದ್ವಿಶತಕದ ಕನಸಿಗೆ ರವೀಂದ್ರ ಜಡೇಜಾ ಅಡ್ಡಿ!
Ranchi , ಶುಕ್ರವಾರ, 17 ಮಾರ್ಚ್ 2017 (13:42 IST)
ರಾಂಚಿ: ಟೀಂ ಇಂಡಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಸ್ಟೀವ್ ಸ್ಮಿತ್ ಕನಸಿಗೆ ಸ್ಪಿನ್ನರ್ ರವೀಂದ್ರ ಜಡೇಜಾ ತಣ್ಣೀರೆರಚಿದರು. ಐದು ವಿಕೆಟ್ ಕಿತ್ತ ಜಡೇಜಾ ಆಸೀಸ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 451 ಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

 

ಒಂದೆಡೆ ಸ್ಮಿತ್ ಬಂಡೆಯಂತೆ ನಿಂತು ಆಡುತ್ತಿದ್ದರೆ, ಇನ್ನೊಂದು ತುದಿಯಲ್ಲಿ ಜಡೇಜಾ ದಾಳಿಗೆ ಕುಸಿದ ಆಸ್ಟ್ರೇಲಿಯನ್ನರು ವಿಕೆಟ್ ಒಪ್ಪಿಸುತ್ತಾ ಸಾಗಿದರು. ಇದರಿಂದಾಗಿ ಸ್ಮಿತ್ ಕೊನೆಯದಾಗಿ 178 ರನ್ ಗಳಿಸಿ ಅಜೇಯರಾಗಿ ಉಳಿದರು. ದ್ವಿಶತಕ ಗಳಿಸುವ ಅವರ ಕನಸು ಕನಸಾಗಿಯೇ ಉಳಿಯಿತು.

 
ಭಾರತದ ಪರ ಜಡೇಜಾ ಐದು ವಿಕೆಟ್ ಕಿತ್ತರೆ, ಉಮೇಶ್ ಯಾದವ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಆದರೂ ಆಸೀಸ್ ಬೃಹತ್ ಮೊತ್ತವನ್ನೇ ಪೇರಿಸಿದ್ದು, ಕೊಹ್ಲಿ ಪೂರ್ಣ ಫಿಟ್ ಅಲ್ಲದಿರುವ ಸ್ಥಿತಿಯಲ್ಲಿ ಭಾರತ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಬೇಕಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭೋಜನ ವಿರಾಮಕ್ಕೆ ಹೋಗಲು ಟೀಂ ಇಂಡಿಯಾಗೆ ಅದೇನು ಅವಸರವೋ!