ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದಿಂದ ಗಾಯದ ನೆಪದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಮೂರೂ ಮಾದರಿಯ ಸರಣಿಯಿಂದ ಕೈಬಿಟ್ಟಿರುವ ಬಗ್ಗೆ ಕೋಚ್ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
ರೋಹಿತ್ ರನ್ನು ತಂಡದಿಂದ ಕೈ ಬಿಟ್ಟಿರುವುದರಲ್ಲಿ ನಮ್ಮ ಪಾತ್ರವಿಲ್ಲ. ನಮಗೆ ಆಯ್ಕೆ ಸಮಿತಿಯಲ್ಲಿ ಮೂಗು ತೂರಿಸಲಾಗದು. ಬಿಸಿಸಿಐ ಮೆಡಿಕಲ್ ಟೀಂ ಆಯ್ಕೆಗಾರರಿಗೆ ರೋಹಿತ್ ಗಾಯದ ಬಗ್ಗೆ ವರದಿ ಸಲ್ಲಿಸುತ್ತದೆ. ಇದರ ಅನ್ವಯ ಅವರು ಆಡಿದರೆ ಅಪಾಯ ಎಂಬ ಕಾರಣಕ್ಕೆ ತಂಡದಿಂದ ಕೈಬಿಟ್ಟಿರಬಹುದು. ಆದರೆ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ.