Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಗುಜರಾತ್ ವಿರುದ್ಧ ಫೈನಲ್ ಆಡುವವರು ಯಾರು?

ರಣಜಿ ಟ್ರೋಫಿ ಕ್ರಿಕೆಟ್
Rajkot , ಬುಧವಾರ, 4 ಜನವರಿ 2017 (17:38 IST)
ರಾಜಕೋಟ್: ಗುಜರಾತ್ ಕ್ರಿಕೆಟ್ ತಂಡ ಈಗಾಗಲೇ ರಣಜಿ ಟ್ರೋಫಿ ಫೈನಲ್ ತಲುಪಿದೆ. ಗುಜರಾಜ್ ವಿರುದ್ಧ ಫೈನಲ್ ನಲ್ಲಿ ಆಡುವವರು ಯಾರು ಎನ್ನುವ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ.

ಮುಂಬೈ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ತಮಿಳುನಾಡು ಸರಿಯಾದ ಸಮಯಕ್ಕೆ ಡಿಕ್ಲೇರ್ ಮಾಡಿಕೊಂಡು ಗೆಲ್ಲಲು 251 ರನ್ ಗಳ ಗುರಿ ನಿಗದಿಪಡಿಸಿದೆ. ದಿನದಂತ್ಯಕ್ಕೆ ಬ್ಯಾಟಿಂಗ್ ಆರಂಭಿಸಿರುವ ಮುಂಬೈ ವಿಕೆಟ್ ನಷ್ಟವಿಲ್ಲದೆ 5 ರನ್ ಗಳಿಸಿದೆ. ನಾಳೆ ತಮಿಳುನಾಡು 10 ವಿಕೆಟ್ ಪಡೆಯಲು ಸಫಲವಾಗುತ್ತಾ, ಮುಂಬೈ ತನ್ನ ಖ್ಯಾತಿಗೆ ತಕ್ಕ ಆಟವಾಡಿ ರನ್ ಚೇಸ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

ತಮಿಳುನಾಡು ವಿರುದ್ಧ ಅಭಿನವ್ ಮುಕುಂದ್ ಮತ್ತು ಇಂದ್ರಜಿತ್ ಶತಕ ದಾಖಲಿಸಿದರು. ಸದ್ಯದ ಮಟ್ಟಿಗೆ ಉಭಯ ತಂಡಗಳಿಗೆ ಗೆಲ್ಲುವ ಅವಕಾಶ ಸಮನಾಗಿದ್ದು, ಯಾರು ಪರಿಸ್ಥಿತಿಯ ಲಾಭವೆತ್ತುತ್ತಾರೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ಹುಡುಗರಿಂದಾಗಿ ರಣಜಿಯಲ್ಲಿ ಸೋಲುಂಡ ಎಂಎಸ್ ಧೋನಿ