ದೆಹಲಿ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲೆರಡು ದಿನ ಅಲ್ಪ ಮೊತ್ತ ಪೇರಿಸಿ ಸಂಕಷ್ಟದಲ್ಲಿದ್ದ ಕರ್ನಾಟಕ ಮೂರನೇ ದಿನದಂತ್ಯಕ್ಕೆ ಚೇತರಿಸಿಕೊಂಡರೂ ಸೋಲಿನ ಭೀತಿಗೆ ಸಿಲುಕಿದೆ. ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ.
ಇದರೊಂದಿಗೆ 81 ರನ್ ಗಳ ಮುನ್ನಡೆ ಪಡೆದಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳು ಮೊದಲ ಇನಿಂಗ್ಸ್ ನ ಚಾಳಿ ಮುಂದುವರಿಸಿದರು. ಪರಿಣಾಮವಾಗಿ ಕರ್ನಾಟಕ ಇಂದೇ ಸೋಲುವ ಭೀತಿಗೆ ಒಳಗಾಗಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ 32 ರನ್ ಗಳಿಸಿ ತಂಡ ಚೇತರಿಸುವಂತೆ ಮಾಡಿದರು. ವಿಕೆಟ್ ಕೀಪರ್ ಗೌತಮ್ 68 ರನ್ ಗಳಿಸಿ ತಂಡಕ್ಕೆ ಮುನ್ನಡೆ ಕೊಡಿಸಿದರು. ಅವರಿಗೆ ನಾಯಕ ವಿನಯ್ ಕುಮಾರ್ 41 ರನ್ ಗಳಿಸಿ ಸಾಥ್ ನೀಡಿದರು.
ನಾಳೆ ಒಂದು ದಿನದ ಪಂದ್ಯ ಬಾಕಿಯಿದ್ದು, ಕರ್ನಾಟಕ ಬೃಹತ್ ಮೊತ್ತ ಕಲೆಹಾಕಲೇ ಬೇಕಿದೆ. ನಾಳೆ ಸೋತರೆ ಇದುವರೆಗೂ ಟೂರ್ನಿಯಲ್ಲಿ ಅಜೇಯವಾಗಿ ಮುಂದುವರಿದ ಕರ್ನಾಟಕ ದುರ್ಬಲ ತಂಡವೊಂದರ ಎದುರು ಮೊದಲ ಸೋಲು ಕಂಡಂತಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ