Publish Date: Sat, 29 Feb 2020 (09:11 IST)
Updated Date: Sat, 29 Feb 2020 (09:13 IST)
ಕೋಲ್ಕೊತ್ತಾ: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಕರ್ನಾಟಕಕ್ಕೆ ಬಂಗಾಳ ಎದುರಾಳಿಯಾಗಿದೆ.
ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಕರ್ನಾಟಕಕ್ಕೆ ಕೆಎಲ್ ರಾಹುಲ್, ಮನೀಶ್ ಪಾಂಡೆ, ಸಿದ್ಧಾರ್ಥ್, ಕರುಣ್ ನಾಯರ್ ಬಲ ತುಂಬಲಿದ್ದಾರೆ. ಮೇಲ್ನೋಟಕ್ಕೆ ಕರ್ನಾಟಕವೇ ಪ್ರಬಲವಾಗಿದ್ದರೂ ಬಂಗಾಳ ತಂಡಕ್ಕೆ ಮನೀಶ್ ತಿವಾರಿ, ಅಭಿಮನ್ಯು ಈಶ್ವರನ್, ಅಶೋಕ್ ದಿಂಡಾ ಪ್ರಮುಖ ಶಕ್ತಿಯಾಗಿದ್ದಾರೆ.
ಇನ್ನೊಂದು ಸೆಮಿಫೈನಲ್ ನಲ್ಲಿ ಗುಜರಾತ್ ಮತ್ತು ಸೌರಾಷ್ಟ್ರ ಪರಸ್ಪರ ಮುಖಾ ಮುಖಿಯಾಗಲಿದೆ. ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ.