ದೆಹಲಿ: ಒಡಿಶಾ ವಿರುದ್ಧ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ಕರ್ನಾಟಕ ತಂಡ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂತಿಮ ದಿನ ಗೆಲುವಿಗೆ 231ರನ್ನುಗಳ ಗುರಿ ಪಡೆದ ಒಡಿಶಾ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತು.
ಇದರೊಂದಿಗೆ ಪಂದ್ಯ ಡ್ರಾಗೊಂಡಿತು. ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸೌರಬ್ ರಾವತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದದರು. ಸೋಲಿನ ಭೀತಿಗೊಳಗಾಗಿದ್ದ ಕರ್ನಾಟಕ ತಂಡಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳು ಚೇತರಿಕೆ ನೀಡಿದರು. ಹೀಗಾಗಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದರೊಂದಿಗೆ ಆರು ಪಂದ್ಯಗಳಿಂದ ಕರ್ನಾಟಕ ನಾಲ್ಕು ಪಂದ್ಯ ಗೆದ್ದು, ಎರಡು ಪಂದ್ಯ ಗೆದ್ದುಕೊಂಡಂತಾಗಿದೆ. ಮೊದಲ ಇನಿಂಗ್ಸ್ ನ ಲೀಡ್ ಆಧಾರದಲ್ಲಿ ಒಡಿಶಾ ಮೂರು ಅಂಕ ಪಡೆದುಕೊಂಡಿದ್ದರೆ, ಕರ್ನಾಟಕ ಕೇವಲ ಒಂದು ಅಂಕಗಳಿಗೆ ತೃಪ್ತಿ ಪಟ್ಟುಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ