Select Your Language

Notifications

webdunia
webdunia
webdunia
webdunia

ಆಫ್ಘಾನಿಸ್ತಾನ ಟೆಸ್ಟ್ "ಪಾಸ್'' ಆಗುವುದು ರಜಪೂತ್ ಗುರಿ

ಆಫ್ಘಾನಿಸ್ತಾನ ಟೆಸ್ಟ್
ನವದೆಹಲಿ , ಶುಕ್ರವಾರ, 5 ಆಗಸ್ಟ್ 2016 (16:32 IST)
ಭಾರತದ ಕೋಚ್ ಹುದ್ದೆ ದಕ್ಕದ ನಿರಾಶೆಯನ್ನು ನೀಗಿಕೊಳ್ಳಲು ಲಾಲ್‌ಚಂದ್ ರಜಪೂತ್ ಜೀವನದಲ್ಲಿ ಹೊಸ ಧ್ಯೇಯೋದ್ದೇಶ ಹೊಂದಿದ್ದಾರೆ. ಅದು ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಆಡಬೇಕೆಂಬುದು. ಮಾಜಿ ಭಾರತ ಮತ್ತು ಮುಂಬೈ ಓಪನರ್ ಇತ್ತೀಚೆಗೆ ಕ್ರಿಕೆಟ್ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರದಲ್ಲಿ ಕೋಚ್ ಉಸ್ತುವಾರಿ ವಹಿಸಿಕೊಂಡು ತಮ್ಮ ಹೊಸ ಬಳಗದೊಂದಿಗೆ ಫಲಪ್ರದ ತಿಂಗಳ ಕಾಲ ಐರೋಪ್ಯ ಪ್ರವಾಸ ಮಾಡಿ ಹಿಂತಿರುಗಿದ್ದಾರೆ.
 
ಆಘ್ಘಾನಿಸ್ತಾನವು ಸ್ಕಾಟ್‌ಲೆಂಡ್ ತಂಡವನ್ನು ಏಕದಿನ ಪಂದ್ಯದಲ್ಲಿ 1-0ಯಿಂದ ಸೋಲಿಸಿದ ಬಳಿಕ ಬೆಲ್‌ಫಾಸ್ಟ್‌ಗೆ ಪ್ರಯಾಣಿಸಿ ಅಲ್ಲಿ ಐರ್ಲೆಂಡ್ ಜತೆ 2-2 ಡ್ರಾ ಮಾಡಿಕೊಂಡಿತು. ವೂರ್‌ಬರ್ಗ್‌ನಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಇನ್ನಿಂಗ್ಸ್ ಮತ್ತು 36 ರನ್ ಜಯಗಳಿಸಿತು.
ಈ ಹುಡುಗರಲ್ಲಿ ಒಳ್ಳೆಯ ಪ್ರತಿಭೆಯಿದ್ದು, ಅವರನ್ನು ನಾನು ನೀವು ನಿಮ್ಮ ಸಹವರ್ತಿಗಳ ಜತೆ ಆಡುತ್ತೀರಾ ಅಥವಾ ಮೇಲ್ಮಟ್ಟದ ತಂಡಗಳ ಜತೆ ಆಡಲು ಬಯಸುತ್ತೀರಾ ಎಂದು ಕೇಳಿದೆ.

ಅವರು ಟಾಪ್ ತಂಡಗಳ ಜತೆ ಆಡಲು ಬಯಸುವುದಾಗಿ ತಿಳಿಸಿದರೆಂದು ರಜಪೂತ್ ಹೇಳಿದರು. ಆದರೆ ಯಾವುದೂ ಸುಲಭವಾಗಿ ಸಿಗುವುದಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಿರಬೇಕು. ವಿಶೇಷವಾಗಿ ಫಿಟ್ನೆಸ್ ಮತ್ತು ಫೀಲ್ಡಿಂಗ್ ಕುರಿತು ಕಷ್ಟಪಡಬೇಕು ಎಂದು ರಜಪೂತ್ ಹೇಳಿದ್ದರು. ಪ್ರತಿಯೊಬ್ಬ ಆಟಗಾರ ನೆಟ್‌ನಲ್ಲಿ ಕನಿಷ್ಟ 50 ಕ್ಯಾಚ್‌ಗಳನ್ನು ಹಿಡಿಯುವುದನ್ನು ಕಡ್ಡಾಯ ಮಾಡಿದ್ದೆ ಎಂದು ರಜಪೂತ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶರ್ಟ್‌ರಹಿತ ಕೊಹ್ಲಿ ಬ್ರೂಸ್‌ಲೀ ರೀತಿಯಲ್ಲಿ ಕಾಣುತ್ತಾರೆ: ಕಪಿಲ್ ದೇವ್