Webdunia - Bharat's app for daily news and videos

Install App

ರಾಹುಲ್ ಮನೋಜ್ಞ ಶತಕ: ಭಾರತಕ್ಕೆ 162 ರನ್ ಲೀಡ್

Webdunia
ಸೋಮವಾರ, 1 ಆಗಸ್ಟ್ 2016 (10:05 IST)
ಓಪನರ್ ಕೆ.ಎಲ್. ರಾಹುಲ್ ಅವರ ಆಕರ್ಷಕ, ವೃತ್ತಿಜೀವನಲ್ಲೇ ಅತ್ಯುತ್ತಮ ಶತಕದ ನೆರವಿನಿಂದ ಭಾರತ ಎರಡನೇ ದಿನದಾಟದಲ್ಲಿ 358ಕ್ಕೆ 5 ವಿಕೆಟ್ ಕಳೆದುಕೊಂಡು ಸುಭದ್ರ ಸ್ಕೋರ್ ಮಾಡಿದೆ. ವೆಸ್ಟ್ ಇಂಡೀಸ್ ತಂಡದ 196 ರನ್‌ ಆಲೌಟ್‌ಗೆ ಉತ್ತರವಾಗಿ  ಭಾರತ  162 ರನ್ ಸದೃಢ ಮುನ್ನಡೆ ಗಳಿಸಿದೆ. ಅಜಿಂಕ್ಯಾ ರಹಾನೆ ಅಜೇಯ 42 ರನ್ ಗಳಿಸಿದ್ದು, ವೃದ್ಧಿಮಾನ್ ಸಹಾ ಅಜೇಯ 17 ರನ್ ಗಳಿಸಿದ್ದಾರೆ. ಇನ್ನೂ 3 ದಿನಗಳು ಬಾಕಿವುಳಿದಿದ್ದು, ಭಾರತಕ್ಕೆ ಟೆಸ್ಟ್ ತಂಡದ ದರ್ಜೆಗೆ ಸಮವಾಗಿಲ್ಲದ ವಿಂಡೀಸ್ ವಿರುದ್ಧ ಜಯದಾಖಲಿಸಲು ಸಾಕಷ್ಟು ಸಮಯಾವಕಾಶವಿದೆ.

ರಾಹುಲ್ ವಿದೇಶಿ ನೆಲದಲ್ಲಿ 15 ಬೌಂಡರಿ ಮತ್ತು ಮೂರು ಬಾರಿ ಸಿಕ್ಸರ್‌ಗಳ ಇನ್ನೊಂದು ಶತಕ ಸಿಡಿಸುವ ಮೂಲಕ ದಿನದ ಹೀರೊ ಆಗಿ ಮಿಂಚಿದರು.
 
 ಪೂಜಾರಾ ಜತೆ ಅವರು 121 ರನ್ ಜತೆಯಾಟವಾಡಿದರು. ವಿರಾಟ್ ಕೊಹ್ಲಿ ಜತೆ ರಾಹುಲ್ 69 ರನ್ ಜತೆಯಾಟವಾಡಿದರು. 44 ರನ್ ಗಳಿಸಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ರೋಸ್ತನ್ ಚೇಸ್ ಆಫ್ ಬ್ರೇಕ್‌ಗೆ ಕೊಹ್ಲಿ ರಾಜೇಂದ್ರ ಚಂದ್ರಿಕಾ ಅವರಿಗೆ ಫಾರ್ವರ್ಡ್ ಶಾರ್ಟ್‌ಲೆಗ್‌ನಲ್ಲಿ ಸುಲಭದ ಕ್ಯಾಚ್ ನೀಡಿ ಔಟಾದರು.
 
 ರಾಹುಲ್ 56ನೇ ಓವರಿನಲ್ಲಿ ಲಾಂಗ್‌ಆನ್‌ನಲ್ಲಿ ಸಿಕ್ಸರ್ ಸಿಡಿಸಿ 182 ಎಸೆತಗಳಲ್ಲಿ ಶತಕ ದಾಖಲಿಸಿದರು. ಅವರ ಮುಂಚಿನ ಎರಡು ಶತಕಗಳನ್ನು 2005ರಲ್ಲಿ ಸ್ಕೋರ್ ಮಾಡಲಾಗಿದ್ದು, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಗಳಿಸಿದ್ದರು.

ಈ ಮೂಲಕ ವೆಸ್ಟ್ಇಂಡೀಸ್‌ನಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಓಪನರ್ ಅತ್ಯಧಿಕ ಸ್ಕೋರ್ ಮಾಡಿ ಅಜಯ್ ಜಡೇಜಾ ಅವರ 97 ರನ್, ಶಿಖರ್ ಧವನ್ ಅವರ 84 ರನ್ ಮತ್ತು ಸುನಿಲ್ ಗವಾಸ್ಕರ್ 65 ರನ್ ಮೀರಿಸಿದರು.
 ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 196ಕ್ಕೆ 10
ಬ್ಯಾಟಿಂಗ್ ವಿವರ
ಮಾರ್ಲನ್ ಸ್ಯಾಮ್ಯುಯಲ್ಸ್ 37, ಬ್ಲಾಕ್‌ವುಡ್ 62, ಕಮಿನ್ಸ್ 24
ವಿಕೆಟ್ ಪತನ
 
4-1 (ಕ್ರೈಗ್ ಬ್ರಾಥ್ವೈಟ್, 2.4), 4-2 (ಡ್ಯಾರೆನ್ ಬ್ರಾವೊ, 2.5), 7-3 (ರಾಜೇಂದ್ರ ಚಂದ್ರಿಕಾ, 5.1), 88-4 (ಜರ್ಮೈನ್ ಬ್ಲ್ಯಾಕ್ 25.3), 115-5 (ಮರ್ಲಾನ್ ಸ್ಯಾಮುಯೆಲ್ಸ್, 29.3), 127-6 (ಶೇನ್ ಡೌರಿಕ್, 35.1), 131-7 (ರೋಸ್ಟನ್ ಚೇಸ್, 36.4), 151-8 (ದೇವೇಂದ್ರ ಬಿಶೂ, 43.3), 158-9 (ಜೇಸನ್ ಹೋಲ್ಡರ್, 45.5), 196-10 (ಶಾನನ್ ಗ್ಯಾಬ್ರಿಯಲ್, 52.3)
 ಭಾರತ ಬೌಲಿಂಗ್ ವಿವರ
ಇಶಾಂತ್ ಶರ್ಮಾ 2 ವಿಕೆಟ್, ಶಮಿ 2 ವಿಕೆಟ್, ಅಶ್ವಿನ್ 5 ವಿಕೆಟ್ ಮತ್ತು ಅಮಿತ್ ಮಿಶ್ರಾ 1 ವಿಕೆಟ್.
ಭಾರತ ಮೊದಲ ಇನ್ನಿಂಗ್ಸ್ 358ಕ್ಕೆ 5 
ಲೋಕೇಶ್ ರಾಹುಲ್ 158, ಪೂಜಾರಾ 46, ಕೊಹ್ಲಿ 44, ರಹಾನೆ 42
ವಿಕೆಟ್ ಪತನ
87-1 (ಶಿಖರ್ ಧವನ್, 19.3), 208-2 (ಚೇತೇಶ್ವರ ಪೂಜಾರ, 72.2), 277-3 (ಲೋಕೇಶ್ ರಾಹುಲ್, 95.4), 310-4 (ವಿರಾಟ್ ಕೊಹ್ಲಿ, 103.3), 327-5 (ರವಿಚಂದ್ರನ್ ಅಶ್ವಿನ್, 112.1)
 ಬೌಲಿಂಗ್ ವಿವರ
 ಗ್ಯಾಬ್ರಿಯಲ್ 1 ವಿಕೆಟ್, ರೋಸ್ಟನ್ ಚೇಸ್ 2 ವಿಕೆಟ್, ಬಿಶೂ 1 ವಿಕೆಟ್ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

ಮುಂದಿನ ಸುದ್ದಿ
Show comments