Webdunia - Bharat's app for daily news and videos

Install App

ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ಇನ್ನು ರಾಹುಲ್ ದ್ರಾವಿಡ್ ಅವರೇ ಮೇಸ್ಟ್ರು!

Webdunia
ಶುಕ್ರವಾರ, 30 ಮಾರ್ಚ್ 2018 (09:09 IST)
ಮುಂಬೈ: ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಎಷ್ಟು ಶಿಸ್ತಾಗಿ ತಮ್ಮ ಹುಡುಗರಿಗೆ ಹೇಳಿಕೊಡುತ್ತಾರೆ ಎನ್ನುವುದನ್ನು ಈಗಾಗಲೇ ಎ ತಂಡದ ಕ್ರಿಕೆಟಿಗರು ಬಹಿರಂಗಪಡಿಸಿದ್ದಾರೆ. ಇನ್ನೀಗ ದ್ರಾವಿಡ್ ಟೀಂ ಇಂಡಿಯಾ ಕೆಲವು ಹಿರಿಯ ಆಟಗಾರರಿಗೂ ಮೇಸ್ಟ್ರು ಆಗಲಿದ್ದಾರೆ!

ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಭಾರತ ತಂಡಕ್ಕೆ ಅಭ್ಯಾಸ ನೀಡಲು ಬಿಸಿಸಿಐ ಗಂಭೀರ ಹೆಜ್ಜೆಯಿಟ್ಟಿದೆ.  ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳುವ ಮೊದಲು ದ್ರಾವಿಡ್ ನೇತೃತ್ವದ ಎ ತಂಡ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಹೀಗಾಗಿ ದ್ರಾವಿಡ್ ಜತೆಗೆ ಟೀಂ ಇಂಡಿಯಾ ಇಬ್ಬರು ಹಿರಿಯ ಟೆಸ್ಟ್ ಸ್ಪೆಷಲಿಸ್ಟ್ ಗಳನ್ನೂ ಬಿಸಿಸಿಐ ಕಳುಹಿಸಿ ಕೊಡಲಿದೆ.

ಮುರಳಿ ವಿಜಯ್ ಮತ್ತು ಅಜಿಂಕ್ಯಾ ರೆಹಾನೆಗೆ ದ್ರಾವಿಡ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ನಲ್ಲಿ ಅಭ್ಯಾಸ ನಡೆಸುವ ಅದೃಷ್ಟ ಒದಗಿಬರಲಿದೆ. ಈ ಇಬ್ಬರು ಆಟಗಾರರು ಎ ತಂಡದ ಇತರ ಆಟಗಾರರೊಂದಿಗೆ ದ್ರಾವಿಡ್ ಗರಡಿಯಲ್ಲಿ ಪಳಗಲಿದ್ದಾರೆ. ದ್ರಾವಿಡ್ ಗೆ ಸಹಾಯಕರಾಗಿ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಭರತ್ ಅರುಣ್ ಇರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಟೆಸ್ಟ್ ಪರೀಕ್ಷೆ

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ: ದಿಡೀರ್ ನಿರ್ಧಾರದ ಹಿಂದಿದೆ ಕಾರಣ

ಮುಂದಿನ ಸುದ್ದಿ
Show comments