Webdunia - Bharat's app for daily news and videos

Install App

ಆರ್ ಸಿಬಿಗೆ ಲಕ್ ಇಲ್ಲ, ಈ ತಂಡಕ್ಕೆ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ

Krishnaveni K
ಬುಧವಾರ, 4 ಸೆಪ್ಟಂಬರ್ 2024 (16:15 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ನಿರ್ಗಮಿಸಿರುವ ರಾಹುಲ್ ದ್ರಾವಿಡ್ ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಈ ತಂಡದ ಪರ ಕೋಚ್ ಆಗಲಿದ್ದಾರೆ.

ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಆರ್ ಸಿಬಿ ಅಭಿಮಾನಿಗಳು ಇನ್ನಾದರೂ ನಮ್ಮ ತಂಡಕ್ಕೆ ಕೋಚ್ ಆಗಿ ಬನ್ನಿ ಎಂದು ಆಗ್ರಹಿಸಿದ್ದರು. ಆದರೆ ಆರ್ ಸಿಬಿ ಅಭಿಮಾನಗಳಿಗೆ ಅದೃಷ್ಟವಿಲ್ಲ ಬಿಡಿ. ದ್ರಾವಿಡ್ ಬೆಂಗಳೂರು ಬಿಟ್ಟು ರಾಜಸ್ಥಾನಕ್ಕೆ ಹಾರುವುದು ಬಹುತೇಕ ನಿಶ್ಚಿತವಾಗಿದೆ.

ಹೌದು, ಮುಂದಿನ ಆವೃತ್ತಿಯ ಐಪಿಎಲ್ ನಲ್ಲಿ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಲಿದ್ದಾರೆ. ಅವರ ಆಯ್ಕೆ ಈಗ ಬಹುತೇಕ ಖಚಿತವಾಗಿದೆ. ಘೋಷಣೆಯೊಂದೇ ಬಾಕಿ ಎನ್ನಬಹುದು. ದ್ರಾವಿಡ್ ಈಗಾಗಲೇ ರಾಜಸ್ಥಾನ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ಮುಂಬರುವ ಹರಾಜಿಗೆ ಮುನ್ನ ಯಾವ ಆಟಗಾರರನ್ನು ರಿಲೀಸ್ ಮಾಡಬೇಕು, ಯಾರನ್ನು ಉಳಿಸಿಕೊಳ್ಳಬೇಕು ಎಂದು ಚರ್ಚೆಯನ್ನೂ ನಡೆಸಿದ್ದಾರಂತೆ.

ಅಷ್ಟಕ್ಕೂ ರಾಹುಲ್ ದ್ರಾವಿಡ್ ಗೆ ರಾಜಸ್ಥಾನ್ ತಂಡ ಹೊಸದೇನಲ್ಲ. ಈಗಾಗಲೇ ಈ ತಂಡದ ಪರ ನಾಯಕನಾಗಿ ಕೋಚ್ ಆಗಿ ದ್ರಾವಿಡ್ ಕಾರ್ಯನಿರ್ವಹಿಸಿದ್ದಾರೆ. ಬಳಿಕ ಅಂಡರ್ 19 ತಂಡದ ಕೋಚ್ ಆಗಲು ಐಪಿಎಲ್ ಗೆ ಗುಡ್ ಬೈ ಹೇಳಿದ್ದರು. ಇದೀಗ ಟೀಂ ಇಂಡಿಯಾದಿಂದ ನಿವೃತ್ತಿಯಾದ ಬೆನ್ನಲ್ಲೇ ಮತ್ತೆ ರಾಜಸ್ಥಾನ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ಮುಂದಿನ ಸುದ್ದಿ
Show comments