Daily Horoscope
✕

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

Krishnaveni K
ಶನಿವಾರ, 30 ಆಗಸ್ಟ್ 2025 (14:28 IST)
Photo Credit: X
ಮುಂಬೈ: ಐಪಿಎಲ್ ನಲ್ಲಿ ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಈಗ ತಂಡವನ್ನು ತೊರೆದಿದ್ದಾರೆ. ಇದರ ಬೆನ್ನಲ್ಲೇ ಅವರು ಈ ತಂಡಕ್ಕೆ ಕೋಚ್ ಆಗಲಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ರಾಹುಲ್ ದ್ರಾವಿಡ್ ಬಳಿಕ ರಾಷ್ಟ್ರೀಯ ತಂಡಕ್ಕೆ ಗುಡ್ ಬೈ ಹೇಳಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿತ್ತು.

ಆದರೆ ರಾಹುಲ್ ದ್ರಾವಿಡ್-ಸಂಜು ಸ್ಯಾಮ್ಸನ್ ಕಾಂಬಿನೇಷನ್ ರಾಜಸ್ಥಾನ್ ಗೆ ವರ್ಕೌಟ್ ಆಗಲಿಲ್ಲ. ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಜಾರಿತ್ತು. ಹೀಗಾಗಿ ನಾಯಕ ಮತ್ತು ಕೋಚ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳೂ ಇದ್ದವು. ಇದೀಗ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದು ಆ ಅನುಮಾನಗಳಿಗೆ ಪುಷ್ಠಿ ನೀಡುವಂತಿದೆ.

ಇದೀಗ ದ್ರಾವಿಡ್ ಆರ್ ಆರ್ ತಂಡ ಬಿಟ್ಟ ಬೆನ್ನಲ್ಲೇ ಫ್ಯಾನ್ಸ್ ಈ ತಂಡಕ್ಕೆ ಬನ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಮುಂಬೈಗೆ ಬನ್ನಿ ಅಂತಿದ್ದಾರೆ. ಇತ್ತ ಕೆಕೆಆರ್ ತಂಡದ ಅಭಿಮಾನಿಗಳೂ ಈ ತಂಡಕ್ಕೆ ಬರಲಿ ಎನ್ನುತ್ತಿದ್ದಾರೆ. ರಾಹುಲ್ ದ್ರಾವಿಡ್ ಮುಂದಿನ ನಡೆಯೇನು ಎಂದು ಕಾದುನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

IND vs NZ: ಕ್ಯಾಚ್ ಹಿಡಿದವ ನೀನೇ, ನಿಂಗೇ ಗೊತ್ತಾಗಿಲ್ವಾ: ರಿಷಭ‍್ ಪಂತ್ ಹೆಲ್ಮೆಟ್ ತೆಗೆದು ಅಲ್ಲಾಡಿಸಿದ್ರು ಶುಭಮನ್ ಗಿಲ್ Video

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments