ಪುಣೆ: ಐಪಿಎಲ್ ಸಂದರ್ಭದಲ್ಲಿ ಧೋನಿ ಟೀಕಿಸಿ ಟ್ವೀಟ್ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದ ಪುಣೆ ಸೂಪರ್ ಜೈಂಟ್ ಮಾಲಿಕರ ಸಹೋದರ ಹರ್ಷ ಗೊಯೆಂಕಾ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಕೆಂಗಣ್ಣು ಬೀರಿದ್ದಾರೆ.
ಕೋಚ್ ವಿಚಾರವಾಗಿ ಹರ್ಷ ಗೊಯೆಂಕಾ ಕೊಹ್ಲಿ ಮೇಲೆ ಟೀಕಾಸ್ತ್ರ ಹರಿಸಿದ್ದಾರೆ. ‘ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿ. ಬೇಕಾದ ಅರ್ಹತೆ: ಪ್ರವಾಸ ಕಾರ್ಯಕ್ರಮಗಳನ್ನು ನಿಗದಿ ಮಾಡುವುದು, ಹೋಟೆಲ್ ರೂಂ ವ್ಯವಸ್ಥೆ ಮಾಡುವುದು, ಬಿಸಿಸಿಐ ಮತ್ತು ನಾಯಕನಿಗೆ ವಿಧೇಯನಾಗಿರುವುದು’ ಎಂದು ಗೊಯೆಂಕಾ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ವ್ಯಕ್ತಿಯೊಬ್ಬ ಅರ್ಜಿ ಎಲ್ಲಿ ಸಿಗುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಗೊಯೆಂಕಾ ಅರ್ಜಿಯೇನೂ ಬೇಡ. ಈ ಅರ್ಹತೆಗಳೊಂದಿಗೆ ಎರಡು ಲೈನ್ ನ ಸಿವಿ ಸಾಕು ಎಂದು ಎರಡು ಗೆರೆಯ ಅರ್ಜಿ ಸಲ್ಲಿಸಿದ್ದ ವೀರೇಂದ್ರ ಸೆಹ್ವಾಗ್ ಗೂ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ