Webdunia - Bharat's app for daily news and videos

Install App

ಟೀಂ ಇಂಡಿಯಾ ಆಟಗಾರರ ಜೊತೆ ಪ್ರಧಾನಿ ಮೋದಿ ಸ್ಮೈಲೀ ಪೋಸ್

Krishnaveni K
ಗುರುವಾರ, 4 ಜುಲೈ 2024 (13:44 IST)
Photo Credit: X
ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಇಂದು ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು. ಈ ವೇಳೆ ಆಟಗಾರರ ಜೊತೆ ಅವರ ಸ್ಮೈಲಿ ಪೋಸ್ ಎಲ್ಲರ ಗಮನ ಸೆಳೆದಿದೆ.

ಇಂದು ಮುಂಜಾನೆ ವಿಶೇಷ ವಿಮಾನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ದೆಹಲಿಗೆ ಬಂದಿಳಿಯಿತು. ಈ ವೇಳೆ ಅವರಿಗೆ ಜನರಿಂದ ಭಾರೀ ಸ್ವಾಗತ ದೊರೆಯಿತು. ಕ್ರಿಕೆಟಿಗರು ಬಾಂಗ್ಲಾ ನೃತ್ಯಗಾರರೊಂದಿಗೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ಬಳಿಕ ಎಲ್ಲರೂ ನೇರವಾಗಿ ಹೋಟೆಲ್ ಗೆ ತೆರಳಿದ್ದರು.

ಇದಾದ ಬಳಿಕ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಧಾನಿ ನಿವಾಸಕ್ಕೆ ಎಲ್ಲಾ ಕ್ರಿಕೆಟಿಗರನ್ನು ಕರೆತರಲಾಯಿತು. ಸುಮಾರು 1 ಗಂಟೆ ಕಾಲ ಮೋದಿ ಜೊತೆ ಕ್ರಿಕೆಟಿಗರು ಕಾಲ ಕಳೆದರು. ಈ ವೇಳೆ ವಿಶ್ವಕಪ್ ಟ್ರೋಫಿ ನೋಡಿ ಪ್ರಧಾನಿ ಖುಷಿಪಟ್ಟಿದ್ದಾರೆ. ಬಳಿಕ ಟೀಂ ಇಂಡಿಯಾ ಜೆರ್ಸಿ ಧರಿಸಿದ್ದ ಎಲ್ಲಾ ಕ್ರಿಕೆಟಿಗರು, ಕೋಚ್ ಸಿಬ್ಬಂದಿ ಪ್ರಧಾನಿ ಜೊತೆ ಫೋಟೋ ಸೆಷನ್ ನಡೆಸಿದರು.

ಪ್ರತಿಯೊಬ್ಬ ಕ್ರಿಕೆಟಿಗರನ್ನೂ ಪ್ರತ್ಯೇಕವಾಗಿ ಮಾತನಾಡಿಸಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಎಲ್ಲರ ಜೊತೆ ಕುಳಿತು ಉಪಾಹಾರ ಸೇವಿಸಿದ್ದಲ್ಲದೆ, ತಮಾಷೆ ಮಾಡುತ್ತಾ ಕಾಲ ಕಳೆದಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಪ್ರತಿಯೊಬ್ಬರೂ ರೌಂಡ್ ಟೇಬಲ್ ಮಾದರಿಯಲ್ಲಿ ಕುಳಿತು ಹರಟೆ ಹೊಡೆದಿದ್ದು  ವಿಶೇಷವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments