Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿಗೆ ಶತಾಯ ಗತಾಯ ಟೀಂ ಇಂಡಿಯಾವನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ

India-Pakistan

Krishnaveni K

ನವದೆಹಲಿ , ಶನಿವಾರ, 15 ಜೂನ್ 2024 (12:03 IST)
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ 2025 ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಈ ಪ್ರತಿಷ್ಠಿತ ಐಸಿಸಿ ಟೂರ್ನಿಗೆ ಭಾರತ ಬರುವುದು ಅನುಮಾನ ಎನ್ನುವುದು ಪಾಕಿಸ್ತಾನದ ಚಿಂತೆಗೆ ಕಾರಣವಾಗಿದೆ.

ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು ಎಂದು ಈಗಾಗಲೇ ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಆದರೂ ಪಿಸಿಬಿ ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಮನ ಒಲಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಯಾಕೆಂದರೆ ಭಾರತ ಬರದೇ ಇದ್ದರೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಲಿದೆ.

ಭಾರತ ತಂಡ ಪಾಕಿಸ್ತಾನದಲ್ಲಿ ಪಂದ್ಯವಾಡಿದರಷ್ಟೇ ಮೈದಾನ ಭರ್ತಿಯಾಗಲಿದೆ. ಅದರಲ್ಲೂ ಭಾರತ-ಪಾಕಿಸ್ತಾನ ಪಂದ್ಯವಿದ್ದರಂತೂ ಸ್ಟೇಡಿಯಂ ಮಾತ್ರವಲ್ಲ, ಡಿಜಿಟಲ್ ಸ್ಟ್ರೀಮಿಂಗ್ ನಲ್ಲೂ ದಾಖಲೆಯ ವೀಕ್ಷಣೆಯಾಗುತ್ತದೆ. ಈ ಎರಡೂ ಸಾಂಪ್ರದಾಯಿಕ ಎದುರಾಳಿಗಳು ಎದುರಾದರೆ ಆಯೋಜಕರಿಗೆ ಲಾಭವೇ.

ಆದರೆ ಈಗ ಟೀಂ ಇಂಡಿಯಾ ಒಂದು ವೇಳೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ತೆರಳಲು ಒಪ್ಪದೇ ಹೋದರೆ ಅದರಿಂದ ಪಾಕಿಸ್ತಾನಕ್ಕೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಮನವೊಲಿಸಲು ಪಿಸಿಬಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ಭಾರತ-ಕೆನಡಾ ಔಪಚಾರಿಕ ಪಂದ್ಯದ ಮೇಲೆ ಮಳೆಯ ಕಾರ್ಮೋಡ