Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮೆನ್ ನೋಡಿಯೇ ಇಲ್ಲ: ಪಾಕಿಸ್ತಾನ ಕೋಚ್

ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮೆನ್ ನೋಡಿಯೇ ಇಲ್ಲ: ಪಾಕಿಸ್ತಾನ ಕೋಚ್
ನವದೆಹಲಿ , ಶುಕ್ರವಾರ, 14 ಅಕ್ಟೋಬರ್ 2016 (16:06 IST)
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ  ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮೆನ್‌ನನ್ನು ನಾನು ನನ್ನ ಕ್ರಿಕೆಟ್ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಪಾಕಿಸ್ತಾನದ ಕೋಚ್ ಮಿಕೈ ಅರ್ಥರ್ ಹೇಳಿದ್ದಾರೆ. 

ದಿ ಟೆಲಿಗ್ರಾಫ್ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ಕೊಹ್ಲಿ ಬ್ಯಾಟಿಂಗ್ ಕೌಶಲ್ಯವನ್ನು ಹೊಗಳಿ ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ ಎಂದು ಬಣ್ಣಿಸಿದರು.
 
ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ತುಂಬಾ ಇಷ್ಟಪಡುತ್ತೇನೆ. ಅವರ ಆಟವನ್ನು ಎಷ್ಟು ಹೊತ್ತು ನೋಡಿದರೂ ಮನಸ್ಸಿಗೆ ಬೇಜಾರಾಗುವುದಿಲ್ಲ. ವಿರಾಟ್ ಕ್ರೀಸ್‌ಗೆ ಬಂದ ಕೂಡಲೇ ಅವರ ಆಟ ನೋಡಬೇಕನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಕಳೆದ ಎರಡು ವರ್ಷಗಳ ಹಿಂದೆ ಅಡಿಲೇಡ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ 141 ರನ್‌ಗಳ ಮೊತ್ತವನ್ನು ಮರೆಯುವಂತಿಲ್ಲ ಎಂದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲೂ ಕೂಡಾ 115 ರನ್‌ಗಳನ್ನು ಪೇರಿಸಿದ್ದರು.  
 
ವಿರಾಟ್ ಕೊಹ್ಲಿಯ ನಾಯಕತ್ವವನ್ನು ಹೊಗಳಿದ ಅವರು ಅವರೊಬ್ಬ ತುಂಬಾ ಇಷ್ಟವಾದ ನಾಯಕ. ವಿರಾಟ್ ತಮಗೆ ನೀಡಿದ ಯಾವುದೇ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವಂತಹ ಸಾಮರ್ಥ್ಯ ಹೊಂದಿದ ನಾಯಕ ಎಂದು ಪಾಕಿಸ್ತಾನದ ಕೋಚ್ ಮಿಕೈ ಅರ್ಥರ್ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಪಂದ್ಯ: ಅಶ್ವಿನ್, ಜಡೇಜಾ, ಶಮಿಗೆ ವಿಶ್ರಾಂತಿ ನೀಡಿದ ಆಯ್ಕೆ ಸಮಿತಿ