ಮುಂಬೈ: ಸುಪ್ರೀಂ ಕೋರ್ಟ್ ನಿಂದ ವಜಾಗೊಂಡ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸ್ಥಾನಕ್ಕೆ ಹೊಸ ಅಧ್ಯಕ್ಷ ಹೆಸರು ಈಗಾಗಲೇ ಎರಡು ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ನ್ಯಾ. ಮುದ್ಗಲ್ ಮತ್ತು ಬಿಸಿಸಿಐ ಉಪಾಧ್ಯಕ್ಷ ಸಿ.ಕೆ. ಖನ್ನಾ.
ಆದರೆ ಖನ್ನಾ ಈಗಾಗಲೇ ಎರಡಕ್ಕಿಂತ ಹೆಚ್ಚು ಬಾರಿ ಅಧಿಕಾರ ಅವಧಿ ಪೂರೈಸಿದ್ದಾರೆ. ಸದ್ಯದ ಮಟ್ಟಿಗೆ ಬಿಸಿಸಿಐನ ಕಾರ್ಯಕಲಾಪಗಳನ್ನು ಮುನ್ನಡೆಸಲು ಸುಪ್ರೀಂ ಕೋರ್ಟ್ ಅವರಿಗೆ ಅಧಿಕಾರ ನೀಡಿದೆ. ಆದರೆ ಖನ್ನಾ ಬಿಸಿಸಿಐ ಅಧ್ಯಕ್ಷರಾದರೆ, ನ್ಯಾಯಾಲಯ ತಾನೇ ನೀಡಿದ ಆದೇಶವನ್ನು ತಾನೇ ಉಲ್ಲಂಘಿಸಿದಂತಾಗುತ್ತದೆ.
ಇದೇ ವೇಳೆ ಮ್ಯಾಚ್ ಫಿಕ್ಸಿಂಗ್, ಕ್ರಿಕೆಟ್ ಅವ್ಯವಹಾರಗಳ ಕುರಿತು ನ್ಯಾಯಾಲಯಕ್ಕೆ ವರದಿ ನೀಡಿದ ನ್ಯಾ.ಮುದ್ಗಲ್ ಮುಂದಿನ ಆಡಳಿತಾಧಿಕಾರಿಯಾಗುವ ನಿರೀಕ್ಷೆಯಿದೆ ಎಂಬ ಮಾತೂ ಬಲವಾಗಿ ಕೇಳಿಬರುತ್ತಿದೆ. ಆದರೆ ಯಾವುದೂ ಇನ್ನೂ ಫೈನಲ್ ಆಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ