Webdunia - Bharat's app for daily news and videos

Install App

ಗೌತಮ್ ಗಂಭೀರ್ ಕೋಚ್ ಆದರೆ ತಂಡದಲ್ಲಿ ಒಡಕು ಖಚಿತ ಅಂತಿದ್ದಾರೆ ಫ್ಯಾನ್ಸ್

Krishnaveni K
ಬುಧವಾರ, 19 ಜೂನ್ 2024 (10:29 IST)
ಮುಂಬೈ: ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ರಿಂದ ತೆರವಾಗಲಿರುವ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಆಯ್ಕೆಯಾಗಲಿದ್ದಾರೆ. ಆದರೆ ಅವರು ಕೋಚ್ ಆದರೆ ತಂಡದಲ್ಲಿ ಒಡಕು ಖಚಿತ ಅಂತಿದ್ದಾರೆ ಫ್ಯಾನ್ಸ್.

ಗೌತಮ್ ಗಂಭೀರ್ ಐಪಿಎಲ್ ನಲ್ಲಿ ಮೆಂಟರ್ ಆಗಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ನೇಮಕಗೊಳ್ಳಲು ಆಸಕ್ತಿ ತೋರಿದ್ದರು. ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆ ಪೈಕಿ ಯಾರೂ ಪ್ರಮುಖರು ಅರ್ಜಿ ಸಲ್ಲಿಸಿಲ್ಲ.

ಇದರ ನಡುವೆ ಗಂಭೀರ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಗಂಭೀರ್ ಕೋಚ್ ಆದರೆ ತಂಡದಲ್ಲಿ ಒಮ್ಮತವಿರಲ್ಲ. ಆಟಗಾರರ ನಡುವೆ ಬಿರುಕುಂಟಾಗಬಹುದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.  ಇದಕ್ಕೆ ಕಾರಣವನ್ನೂ ನೀಡುತ್ತಿದ್ದಾರೆ.

ಗಂಭೀರ್ ಗೆ ಈಗ ಟೀಂ ಇಂಡಿಯಾದಲ್ಲಿರುವ ವಿರಾಟ್ ಕೊಹ್ಲಿಯಂತಹ ಆಟಗಾರರ ಜೊತೆ ಭಿನ್ನಾಭಿಪ್ರಾಯವಿದೆ. ಜೊತೆಗೆ ಅವರು ಕೊಂಚ ಈಗೋ ಇರುವ ಮನುಷ್ಯ. ಕೋಪಿಷ್ಠ, ಜೊತೆಗೆ ಜಗಳಗಂಟ ಎಂಬ ಹಣೆಪಟ್ಟಿಯಿದೆ. ಹೀಗಿರುವ ವ್ಯಕ್ತಿ ಟೀಂ ಇಂಡಿಯಾದ ಕೋಚ್ ಆದರೆ ಕೆಲವೇ ದಿನಗಳಲ್ಲಿ ತಂಡದಲ್ಲಿ ಒಡಕುಂಟಾಗುವುದು ಖಚಿತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments