ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಗರದ ಹೊರವಲಯದಲ್ಲಿ 49 ಎಕರೆ ಭೂಮಿಯನ್ನು ನೀಡಿದಲ್ಲಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಳಾಂತರಿಸುವುದಿಲ್ಲ ಎಂದು ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ಮುಖ್ಯಸ್ಥ ನಿರಂಜನ್ ಶಾಹ ಹೇಳಿದ್ದಾರೆ.
ಕ್ರಿಕೆಟ್ ನಿಯಂತ್ರಕ ಸಂಸ್ಥೆ ಬಿಸಿಸಿಐ, ರಾಜ್ಯ ಸರಕಾರ ಜೂನ್ 30ರೊಳಗೆ ಭೂಮಿಯನ್ನು ನೀಡಿದಲ್ಲಿ ಎನ್‌ಸಿಎ ಸ್ಥಳಾಂತರಿಸದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಹವಾಮಾನ ಎಲ್ಲಾ ಕಾಲದಲ್ಲಿಯೂ ಉತ್ತಮವಾಗಿರುವುದರಿಂದ ಕ್ರೀಡಾಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಆದ್ದರಿಂದ, ಎನ್‌ಸಿಎ ನಗರದಲ್ಲಿಯೇ ಮುಂದುವರಿಸಬೇಕು ಎನ್ನುವುದು ಬಿಸಿಸಿಐ ಬಯಕೆಯಾಗಿದೆ ಎಂದು ಶಾಹ್ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿದ ಸಮಾರಂಭದಲ್ಲಿ ತಿಳಿಸಿದ್ದಾರೆ.
ಕಳೆದ 2000 ವರ್ಷದಿಂದಲು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಅಕಾಡೆಮಿಯನ್ನು ನಗರಿಂದ ಹೊರಗೆ ಸ್ಥಳಾಂತರಿಸಲಾಗುವುದು ಎಂದು ಎನ್‌ಸಿಎ ಅಡಳಿತ ಮಂಡಳಿ ಮೇ 29 ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.