Webdunia - Bharat's app for daily news and videos

Install App

ಶ್ರೀಲಂಕಾ ವಿರುದ್ಧ ಸ್ಪಿನ್ ಪಿತೂರಿಗೆ ಆಸೀಸ್ ಕ್ಯಾಂಪ್‌ನಲ್ಲಿ ಮುರಳೀಧರನ್

Webdunia
ಗುರುವಾರ, 14 ಜುಲೈ 2016 (14:17 IST)
ಶ್ರೀಲಂಕಾವನ್ನು ಅವರ ನೆಲದಲ್ಲೇ ಸೋಲಿಸುವುದಕ್ಕಾಗಿ  ಸ್ಥಳೀಯ ಸ್ಪಿನ್ ಗ್ರೇಟ್ ಮುತ್ತಯ್ಯ ಮುರಳೀಧರನ್ ಅವರನ್ನು ಸ್ಲೋ ಬೌಲರುಗಳ ನೆರವಿಗೆ ಆಸ್ಟ್ರೇಲಿಯಾ ನೇಮಿಸಿಕೊಂಡಿದೆ. ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್ ಸರಣಿ ನಡೆಯಲಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ 44 ವರ್ಷದ ಆಫ್‌ಸ್ಪಿನ್ನರ್ 2014ರಲ್ಲಿ ಇದೇ ರೀತಿ ಆಸ್ಟ್ರೇಲಿಯಾ ಜತೆ ಅಲ್ಪಾವಧಿಯ ಮಾರ್ಗದರ್ಶಕರಾಗಿದ್ದರು.

ಮುರಳಿ ಶ್ರೀಲಂಕಾ ಜತೆ ತುಂಬಾ ಅನುಭವ ಹೊಂದಿದ್ದು, ಅವರು ಅಪಾ ವಿಕೆಟ್ ಕಬಳಿಸಿದ್ದಾರೆ. ಈ ಸರಣಿಯಲ್ಲಿ ನಮ್ಮ ಸ್ಪಿನ್ನರುಗಳಿಗೆ ನೆರವಾಗಲು ಸ್ಪಿನ್ ಒಳನೋಟಕ್ಕಾಗಿ ಅಂತಹವರ ಅಗತ್ಯವಿದೆ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹೇಳಿದರು.
 ಆಸೀಸ್ ಸ್ಪಿನ್ನರುಗಳಾದ ನಾಥನ್ ಲಯನ್ ಮತ್ತು ಸ್ಟೀವ್ ಓಕೀಫೆ ಜತೆ ನೆಟ್‌ನಲ್ಲಿದ್ದ ಮುರಳೀಧರನ್, ಇಂತಹ ಅಲ್ಪಕಾಲೀನ ಕೆಲಸಕ್ಕೆ ತಾವು ಎದುರುನೋಡುತ್ತಿದ್ದು, ತಮ್ಮ ದೇಶದವರ ವಿರುದ್ಧವೇ ಸ್ಪಿನ್ ಕೈಚಳಕ ತೋರಿಸಲು ಪ್ರವಾಸಿ ತಂಡಕ್ಕೆ ನೆರವಾಗಲು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. 
 
 ನಾನು ಶ್ರೀಲಂಕಾ ಕ್ರಿಕೆಟ್‌ನಲ್ಲಿ ಭಾಗಿಯಾಗಿಲ್ಲ. ಏಕೆಂದರೆ ಉಳಿದವರು ಭಾಗಿಯಾಗಿದ್ದಾರೆ ಎಂದು ತಮ್ಮ ಆಟದ ದಿನಗಳಲ್ಲಿ ಆಸ್ಟೇಲಿಯಾಕ್ಕೆ ಮಗ್ಗುಲ ಮುಳ್ಳಾಗಿದ್ದ ಮುರಳೀಧರನ್ ಹೇಳಿದರು.
 
ಆಸ್ಟ್ರೇಲಿಯಾ ನನಗೆ ಎರಡು ಬಾರಿ ಆಫರ್ ಮಾಡಿದೆ. ನಾವು ಇತರೆ ಆಟಗಾರರಿಗೆ ನನ್ನ ಸ್ಪಿನ್ ಜ್ಞಾನ ಧಾರೆಯೆರೆಯುತ್ತಿದ್ದು, ಇದು ನಮ್ಮ ದೇಶ ಅಥವಾ ಬೇರೆಯವರು ಎಂಬ ಭೇದಭಾವವಿಲ್ಲ ಎಂದು ಹೇಳಿದರು. ನಾನು ನನ್ನ ಕುಟುಂಬದ ಕಡೆ ಗಮನಹರಿಸುವುದು ಮುಖ್ಯವಾಗಿದೆ. ಆದ್ದರಿಂದ ನಾನು ಅಲ್ಪಾವಧಿಯ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಇಂತಹ ಕಾರ್ಯಭಾರ ಶ್ರೀಲಂಕಾದಲ್ಲಿ ಲಭ್ಯವಿಲ್ಲ ಎಂದು ಮುರಳೀಧರನ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

IPL 2025: ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರ, ತವರಿನಲ್ಲಿ ಕನಿಷ್ಠ ಎರಡು ಪಂದ್ಯ ಗೆಲ್ಲಲೇಬೇಕಾದ ಒತ್ತಡ

IPL 2025: ಗೋಯಂಕಾಗೆ ಚಮಕ್‌ ಕೊಡ್ತಾರಾ ರಾಹುಲ್‌, ಡೆಲ್ಲಿ ವಿರುದ್ಧ ಮುಯ್ಯಿ ತೀರಿಸುತ್ತಾ ಲಖನೌ

IPL 2005: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು ಯಾರು ಗೊತ್ತಾ

Ambati Rayudu: ಆರ್ ಸಿಬಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಅಂಬಟಿ ರಾಯುಡು, ಇವರೇನಾ ಅವರು ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments