‘ಬ್ರೌನ್ ನಾಯಿ’! ಮೊಹಮ್ಮದ್ ಸಿರಾಜ್ ಗೆ ಆಸ್ಟ್ರೇಲಿಯನ್ನರು ನಿಂದಿಸಿದ್ದು ಹೀಗೆ!

Webdunia
ಭಾನುವಾರ, 10 ಜನವರಿ 2021 (16:49 IST)
ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರರ ವಿರುದ್ಧ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ಬೆಂಬಲಿಗರ ಕೆಲವು ಗುಂಪು ಜನಾಂಗೀಯವಾಗಿ ನಿಂದಿಸಿದ ಘಟನೆ ಈಗ ಭಾರೀ ವಿವಾದ ಸೃಷ್ಟಿಸಿದೆ.


ಈ ಕಿಡಿಗೇಡಿಗಳ ಗುಂಪು ಮೊಹಮ್ಮದ್ ಸಿರಾಜ್ ರನ್ನು ಕುರಿತು ‘ಬ್ರೌನ್ ನಾಯಿ’ ಎಂದು ಮೂದಲಿಸಿದೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಭಾರತೀಯ ನಾಯಕ ಅಜಿಂಕ್ಯಾ ರೆಹಾನೆ ಮತ್ತು ಸಿರಾಜ್ ಸ್ಥಳದಲ್ಲಿದ್ದ ಅಂಪಾಯರ್, ಮ್ಯಾಚ್ ರೆಫರಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆಯಂತೂ ಪಂದ್ಯದ ನಡುವೆ ಪೊಲೀಸರು ಬಂದು ಕುಹುಕವಾಡುತ್ತಿದ್ದ ಗುಂಪನ್ನು ಮೈದಾನದಿಂದಲೇ ಹೊರಗಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡಾ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ದುರದೃಷ್ಟಕರ ಘಟನೆ. ಜನಾಂಗೀಯವಾಗಿ ದೂಷಿಸುವುದನ್ನು ಯಾರೂ ಸಹಿಸಲು ಸಾಧ‍್ಯವಿಲ್ಲ ಎಂದಿದೆ.

ಇನ್ನು, ಸ್ಪಿನ್ನರ್ ಆರ್ ಅಶ್ವಿನ್ ಕೂಡಾ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇದು ನನ್ನ ನಾಲ್ಕನೇ ಆಸ್ಟ್ರೇಲಿಯಾ ಟೂರ್. ಇದುವರೆಗೆ ಹಲವು ಬಾರಿ ಇಂತಹ ಮೂದಲಿಕೆಗಳನ್ನು ಇಲ್ಲಿನ ಪ್ರೇಕ್ಷಕರಿಂದ ಕೇಳಿದ್ದೇವೆ. ಆದರೆ ಈ ಬಾರಿ ಅವರು ಎಲ್ಲೆ ಮೀರಿದ್ದಾರೆ. ಈ ಬಗ್ಗೆ ನಾವು ಅಧಿಕೃತವಾಗಿ ದೂರು ನೀಡಿದ್ದೇವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಮುಂದಿನ ಸುದ್ದಿ
Show comments