ಎಡ್ಗ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಲಾರ್ಡ್ಸ್‌ನಲ್ಲಿ ಆಡಿದ ಸೇನಾನಿಗಳು ಮರಳುವುದನ್ನು ನೋಡಲು ಬಯಸಿದ್ದೇನೆ ಎಂದು ಪಾಕಿಸ್ತಾನ ಕೋಚ್ ಮಿಕಿ ಆರ್ಥರ್ ತಿಳಿಸಿದ್ದಾರೆ. ಪ್ರವಾಸಿ ತಂಡವು ಕ್ರಿಕೆಟ್ ಮನೆಯಾದ ಲಾರ್ಡ್ಸ್‌ನಲ್ಲಿ 75 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯಗಳಿಸಿದರೂ ಓಲ್ಡ್ ಟ್ರಾಫರ್ಡ್‌ನಲ್ಲಿ ಹೀನಾಯ 330 ರನ್ ಸೋಲನುಭವಿಸಿ ಇಂಗ್ಲೆಂಡ್ ಸರಣಿ ಸಮಮಾಡಿಕೊಂಡಿತ್ತು.
ಓಲ್ಡ್ ಟ್ರಾಫರ್ಡ್‌ನಲ್ಲಿ ನಮ್ಮ ಪ್ರದರ್ಶನದಿಂದ ನನಗೆ ನಿಜವಾಗಲೂ ನಿರಾಶೆಯಾಗಿದೆ ಎಂದು ಮೂರನೇ ಟೆಸ್ಟ್‌ಗೆ ಮುನ್ನ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಆರ್ಥರ್ ತಿಳಿಸಿದರು.
ನಾವು ಲಾರ್ಡ್ಸ್‌ನಲ್ಲಿ ಯುದ್ಧಾಳುಗಳಾಗಿದ್ದವರು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಸಂಪೂರ್ಣ ತದ್ವಿರುದ್ಧ ಪ್ರದರ್ಶನ ನೀಡಿದೆವು. ನಾವು ಸರಿಯಾದ ಹಳಿಯಲ್ಲಿ ಸಾಗಲು ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಎಂದೂ ಈ ಸಂದರ್ಭದಲ್ಲಿ ಹೇಳಿದರು.
ಕುಕ್ ಮತ್ತು ರೂಟ್ ಇಬ್ಬರೂ ಈ ಕ್ಷಣದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ದಾರಿದೀಪವಾಗಿದ್ದು, ಅವರನ್ನು ಹೊಸ ಚೆಂಡಿನೊಂದಿಗೆ ಔಟ್ ಮಾಡಿದರೆ ನಮಗೆ ಗೆಲ್ಲುವ ನಿಜವಾದ ಅವಕಾಶವಿರುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.