ಆಸ್ಟೇಲಿಯಾ ಕ್ರಿಕೆಡ್ ತಂಡದ ಮಾಜಿ ನಾಯಕನೋರ್ವ ಯುವ ಆಟಗಾರನೊಬ್ಬನಿಗೆ ಫಿದಾ ಆಗಿದ್ದಾರೆ. ಆತನನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಕನಸು ಕಾಣುತ್ತಿದ್ದಾರೆ. ಆ ಬಾಲಕ ಅವರ ತವರು ನೆಲದವನಾಗಿರಬಹುದೆಂದು ನೀವು ಊಹಿಸಿದರೆ ಅದು ತಪ್ಪು. ಆತ 16ರ ಹರೆಯದ ನೇಪಾಳಿ ಬಾಲಕ ಸಂದೀಪ್ ಲಮಿಚ್ಚಾನೆ.
ನೇಪಾಳ್ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿರುವ ಯುವ ಲೆಗ್ ಸ್ಪಿನ್ನರ್ ಸಂದೀಪ್‌ಗೆ ತಾವು ನಡೆಸುತ್ತಿರುವ 'ಕ್ಲಾರ್ಕ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯಲು ಕ್ರಿಕೆಟ್ ದಿಗ್ಗಜ ಆಫರ್ ನೀಡಿದ್ದಾರೆ.
ಕ್ಲಾರ್ಕ್ ಆಹ್ವಾನವನ್ನು ತುಂಬು ಹೃದಯದಿಂದ ಸ್ವೀಕರಿಸಿರುವ ಬಾಲಕ ಸೆಪ್ಟೆಂಬರ್ 26 ರಂದು ನಡೆಯಲಿರುವ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲಿದ್ದಾನೆ.
ಸಂದೀಪ್ ಅತ್ಯುತ್ತಮ ಯುವ ಆಟಗಾರ. ಕ್ರಿಕೆಟ್‌ನ್ನು ಆನಂದಿಸುವ ಆಟದ ಕಡೆ ಬದ್ಧತೆಯನ್ನು ಹೊಂದಿದ್ದಾರೆ ಎಂದು ಕ್ಲಾರ್ಕ್ ಹೇಳಿದ್ದಾರೆ.
ಈ ವರ್ಷ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿದ್ದ ಸಂದೀಪ್ 14 ವಿಕೆಟ್ ಪಡೆದು ಎರಡನೇ ಗರಿಷ್ಠ ವಿಕೆಟ್ ಟೇಕರ್ ಎನಿಸಿ ಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ